ಸ್ವಾತಂತ್ರ್ಯವನ್ನು ಮನಃಪೂರ್ವಕವಾಗಿ ಆಚರಿಸಬೇಕು : ನಿವೃತ್ತ ಡಿವೈಎಸ್ಪಿ ಮುಹಮ್ಮದ್

Update: 2018-08-15 17:54 GMT

ಮಂಗಳೂರು, ಆ. 15: ಸ್ವಾತಂತ್ರ್ಯವನ್ನು ನಾವು ಮನಃಪೂರ್ವಕವಾಗಿ ಆಚರಿಸಬೇಕು. ಭಾರತದಲ್ಲಿ ಇರುವಷ್ಟು ಸ್ವತಂತ್ರ್ಯ ಎಲ್ಲಿಯೂ ಇಲ್ಲ. ನಮ್ಮ ದೇಶ ಭಾರತ ಎಂದು ಗರ್ವದಿಂದ ಹೇಳಬೇಕು ಎಂದು ನಿವೃತ್ತ ಡಿವೈಎಸ್ಪಿ ಪಿ.ಕೆ ಮುಹಮ್ಮದ್ ಹೇಳಿದರು.

ಅವರು 72 ನೇ ಸ್ವಾತಂತ್ರ್ಯವನ್ನು ಅದ್ದೂರಿಯಾಗಿ ನೆರವೇರಿಸಿದ ಕಂಕನಾಡಿ ಬಾಲಿಕಾ ಆಶ್ರಮ ರಸ್ತೆಯ ಪೀಟರ್ಸ್ ಕೋರ್ಟ್ ಅಪಾರ್ಟ್ ಮೆಂಟ್ ಸೊಸೈಟಿಯ "ಸ್ವಾತಂತ್ರೋತ್ಸವ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಹಂಸ ಹಾಯಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 72 ವರ್ಷವಾದರೂ ದಲಿತರ ಹಾಗೂ ಇತರ ಹಿಂದುಳಿದವರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾದಕರ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸೊಸೈಟಿಯ ಅಧ್ಯಕ್ಷ ಡಾ. ಝಲ್ಪಿಕರ್ ಅಹಮ್ಮದ್, ಉಪಾಧ್ಯಕ್ಷ ಡಾ. ಭಾರತಿ, ಕಾರ್ಯದರ್ಶಿ ಹೆರಾಲ್ಡ್‌, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್, ಜೊತೆ ಕೋಶಾಧಿಕಾರಿ ಬಶೀರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಲ್ಯಾನ್ಸಿ ಪೀಟರ್ಸ್, ಸಲೀಂ, ಅರ್ಬನ್ ಡಿ'ಸೋಜ, ಹಂಝ ಪುತ್ತೂರು, ಡಿ.ಕೆ ಹಮೀದ್, ಶಬ್ಬೀರ್ ಸಿದ್ಧಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News