ಮಂಗಳೂರು: ಮಸ್ಜಿದುತ್ತಕ್ವಾದಲ್ಲಿ ಸ್ವಾತಂತ್ರ್ಯೊತ್ಸವ

Update: 2018-08-15 18:08 GMT

ಮಂಗಳೂರು, ಆ. 15: ಮಸ್ಜಿದುತ್ತಕ್ವಾದಲ್ಲಿ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ  ಯೆನೆಪೊಯ ಅಬ್ದುಲ್ಲಾ ಕುಂಞಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ರಾಷ್ಟ್ರಗೀತೆ ಹಾಡಿದರು.

ನಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗಿ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಸುತ್ತಾ, ನಾವು ಭಾರತೀಯರಾಗಿ ಹುಟ್ಟಿರುವುದು ನಮ್ಮ ಬಹು ದೊಡ್ಡ ಅದೃಷ್ಟವೆಂದು ಸಂಸ್ಥೆಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ ಹೇಳಿದರು.

ವಿಧಾನ ಪರಿಷತ್ ಸದಸ್ಯರೂ, ಫಿಝಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಬಿ.ಎಂ.ಫಾರೂಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪಿಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಅಲಿ ಕೃಷ್ಣಾಪುರ ಹಾಗೂ ಸಂಸ್ಥೆಯ ಸದಸ್ಯರಾದ  ಹಾಶಿರ್ ಸಂದರ್ಭೊಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಜನತಾದಳ ಅಧ್ಯಕ್ಷ ಮುಹಮ್ಮದ್ ಕುಂಞಿ, ತಕ್ವಾ ಅಕಾಡಮಿಯ ಪ್ರಾಶುಪಾಲರು ಹಾಪಿಝ್ ಅಬ್ದುಲ್ ರಹಮಾನ್ ಸಖಾಫಿ ಹಾಗೂ ಆಡಳಿತ ಅಧಿಕಾರಿ ಅಸ್ಮ ಮುಹಮ್ಮದ್ ಆಸಫ್, ಕಾರ್ಯ ನಿರ್ವಾಹಕ ಹಸನ್ ಕುಂಞಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅಫ್ರಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆಲಿಯಾ ಮತ್ತು ಸ್ವಾಲಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸಲ್ವಾ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News