ಕ್ಯಾಥೊಲಿಕ್ ಧರ್ಮಗುರುಗಳಿಂದ ಸಾವಿರಾರು ಮಕ್ಕಳ ಮೇಲೆ ಲೈಂಗಿಕ ಹಲ್ಲೆ: ನ್ಯಾಯ ಪಂಚಾಯತ್ ವರದಿ

Update: 2018-08-15 18:17 GMT

ಅಮೆರಿಕ: ಹ್ಯಾರಿಸ್‌ಬರ್ಗ್ (ಅಮೆರಿಕ), ಆ. 15: ಅಮೆರಿಕದ ಪೆನ್ಸಿಲ್ವೇನಿಯ ರಾಜ್ಯದ 6 ಡಯೋಸಿಸ್‌ಗಳಲ್ಲಿ ನೂರಾರು ರೋಮನ್ ಕ್ಯಾಥೊಲಿಕ್ ಧರ್ಮಗುರುಗಳು 1,000ಕ್ಕೂ ಅಧಿಕ ಮಕ್ಕಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ ಹಾಗೂ ಅವುಗಳನ್ನು ಮುಚ್ಚಿಹಾಕಲು ಚರ್ಚ್‌ನ ಹಿರಿಯ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಹತ್ವದ ನ್ಯಾಯ ಪಂಚಾಯತ್ ವರದಿಯೊಂದು ತಿಳಿಸಿದೆ.

ದೌರ್ಜನ್ಯಕ್ಕೊಳಗಾದ ಮಕ್ಕಳ ನಿಜವಾದ ಸಂಖ್ಯೆ ಸಾವಿರಾರು ಪ್ರಮಾಣದಲ್ಲಿ ಇರಬಹುದು ಎಂದು ಮಂಗಳವಾರ ಬಿಡುಗಡೆ ಮಾಡಿದ ವರದಿ ಹೇಳಿದೆ.

 ಕೆಲವು ದಾಖಲೆಗಳು ಕಳೆದುಹೋಗಿವೆ ಹಾಗೂ ಹಲವು ಸಂತ್ರಸ್ತರು ಹೇಳಿಕೆ ನೀಡಲು ಹೆದರಿದ್ದಾರೆ ಎಂದು ಅದು ತಿಳಿಸಿದೆ.

1950ರ ದಶಕದ ಮಧ್ಯ ಭಾಗದಿಂದ ಆರಂಭಿಸಿ ಹಲವು ದಶಕಗಳ ಅವಧಿಯಲ್ಲಿ ಈ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News