ಮುಡಿಪು: ಶಾಂತಿ ಸೌಹಾರ್ದ ಸಾರಿದ ‘ಫ್ರೀಡಂ ಸ್ಕ್ವಾರ್’ ಕಾರ್ಯಕ್ರಮ

Update: 2018-08-16 09:00 GMT

 ಮಂಗಳೂರು, ಆ.16: ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಸಮಿತಿಯ ವತಿಯಿಂದ ‘ಫ್ರೀಡಂ ಸ್ಕ್ವಾರ್ 2018’ ಕಾರ್ಯಕ್ರಮ ಬುಧವಾರ ಮುಡಿಪು ಜಂಕ್ಷನ್‌ನಲ್ಲಿ ನಡೆಯಿತು.

  ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಸಯ್ಯಿದ್ ಇಬ್ರಾಹೀಂ ಬಾತಿಷಾ ತಂಙಳ್ ಅಲ್ಬುಖಾರಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯಾಧ್ಯಕ್ಷ ಅಬೂಬಕರ್ ರಿಯಾಝ್ ರಹ್ಮಾನಿ ಪ್ರತಿಜ್ಞಾ ವಿಧಿ ಬೋಧಿಸಿದರು. ಯಾಸಿರ್‌ಅರಾಫತ್ ಕೌಸರಿ ಮುಖ್ಯ ಭಾಷಣ ಮಾಡಿದರು.

ಸರಕಾರಿ ಮುಸ್ಲಿಮ್ ವಸತಿ ಶಾಲೆಯ ಶಿಕ್ಷಕ ಮುರುಗೆಯ್ಯಿ ಕೊಗನೂರಮಠ ಹಾಗೂ ಮುಡಿಪು ಚರ್ಚಿನ ಧರ್ಮಗುರು ಫಾ.ಬೆಂಝಮಿನ್ ಫಿಂಟೋ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸ್ವಾಗತ ಸಮಿತಿ ಕೋಶಾಧಿಕಾರಿ ಹಿದಾಯತುಲ್ಲಾ ಅಜ್ಜಿನಡ್ಕ, ಮುಡಿಪು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ಅಧ್ಯಕ್ಷ ಟಿ.ಆರ್.ಅಬ್ದುರ್ರಝಾಕ್ ಹಾಜಿ ಮುಡಿಪು, ಮಂಗಳೂರು ವಲಯ ಕೋಶಾಧಿಕಾರಿ ಅಬ್ದುಲ್ ಖಾದರ್ ಎ.ಕೆ. ಕಣ್ಣೂರು, ಹನೀಫ್ ಎಸ್.ಬಿ., ಕೆಂಪಿ ಶಾಹುಲ್ ಉಪ್ಪಿನಂಗಡಿ, ಮಾಹಿನ್ ದಾರಿಮಿ ಪಾತೂರು, ಬಶೀರ್‌ ಅಝ್ಹರಿ ಸಾಂಬರತೋಟ, ಶಫೀಕ್‌ಹೂಹಾಕುವಕಲ್ಲು ಮುಂತಾದವರು ಉಪಸ್ಥಿತರಿದ್ದರು.

ಮಂಗಳೂರು ವಲಯ ಪ್ರ.ಕಾರ್ಯದರ್ಶಿ ಹಾಫಿಳ್ ಝೈನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಅಝೀಝ್ ಸಾಂಬರತೋಟ ವಂದಿಸಿದರು. ಇರ್ಶಾದ್ ಉರುಮಣೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News