ಗುರುಪುರ ಅಲ್- ಹೈದ್ರುಸಿಯಾದಲ್ಲಿ ಸ್ವಾತಂತ್ರೋತ್ಸವ

Update: 2018-08-16 12:41 GMT

ಮಂಗಳೂರು, ಆ.16: ರೋಯಲ್‌ಗೈಸ್‌ ಗುರುಪುರ ಇವರಿಂದ ಗುರುಪುರದ ಅಲ್- ಹೈದ್ರುಸಿಯಾ ಜುಮಾ ಮಸೀದಿಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಸಲಾಯಿತು.

ಮಸೀದಿಯ ಮುಖ್ಯಕತೀಬ್ ಉಸ್ತಾದ್ ನಝೀರ್ ಫೈಜಿ ದುಆಗೈದು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ನಯೀಮ್ ಜಿ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋಯಲ್‌ಗೈಸ್ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News