ತಲಪಾಡಿ ಫಲಾಹ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2018-08-16 12:45 GMT

ಮಂಗಳೂರು, ಆ.16: ತಲಪಾಡಿಯ ಫಲಾಹ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಫಲಾಹ್ ಎಜ್ಯುಕೇಶನ್ ಸೊಸೈಟಿ ತಲಪಾಡಿ ಅಧ್ಯಕ್ಷ ಹಾಜಿ ಯು.ಬಿ. ಮುಹಮ್ಮದ್ ಧ್ವಜಾರೋಹಣಗೈದರು.

ಈ ಸಂದರ್ಭದಲ್ಲಿ 2017-18ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಇದಕ್ಕೆ ಕಾರಣಕರ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

 ಸಂಸ್ಥೆಯ ಉಪಾಧ್ಯಕ್ಷ ಟಿ.ಎಂ. ಅಬ್ಬಾಸ್, ಕಾರ್ಯದರ್ಶಿ ಟಿ.ಎಂ. ಬಶೀರ್, ಮಾಜಿ ಅಧ್ಯಕ್ಷ ಹಾಜಿ ಅಬ್ಬಾಸ್ ಮಜಲ್, ಮಾಜಿ ಕಾರ್ಯದರ್ಶಿ ಎನ್.ಅರಬಿ ಕುಂಞಿ, ಸದಸ್ಯರಾದ ಅಬ್ಬಾಸ್ ತಲಪಾಡಿ, ಅಬ್ಬಾಸ್ ಉಚ್ಚಿಲ್, ಕೆ.ಸಿ.ರೋಡ್, ಮಸೀದಿ ಅಧ್ಯಕ್ಷ ಅಬ್ಬಾಸ್ ಕೊಳಂಗೆರೆ, ಸದರ್ ಉಸ್ತಾದ್ ಮುಸ್ತಫ ಕಮಾಲ್, ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಆಯಿಶಾ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಕೋಶಾಧಿಕಾರಿ ಇಸ್ಮಾಯೀಲ್ ನಾಗತೋಟ ಮಾತನಾಡಿದರು.

 ಕನ್ನಡ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ರಫೀಕ್ ಸ್ವಾಗತಿಸಿದರು. ಶಿಕ್ಷಕಿ ಫಾತಿಮಾ ಆಸ್ಮಿನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜೀವಿತಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News