ಪುತ್ತೂರು ನಗರಸಭಾ ಚುನಾವಣೆ : 11 ನಾಮಪತ್ರ ಸಲ್ಲಿಕೆ

Update: 2018-08-16 13:00 GMT

ಪುತ್ತೂರು,ಆ.16: ನಗರ ಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಎರಡು ದಿನಗಳ ಮಾತ್ರವೇ ಬಾಕಿಯಿದ್ದು ಆ.16ರಂದು ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಮಂಗಳವಾರ ಇಬ್ಬರು ಹಾಗೂ ಗುರುವಾರ 9 ಮಂದಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 

ಬಿಜೆಪಿಯಿಂದ ಬನ್ನೂರು ವಾರ್ಡ್ 5ರಲ್ಲಿ ಹಿಂದುಳಿದ ವರ್ಗ(ಬಿ) ಮಹಿಳೆಗೆ ಮೀಸಲಿರಿಸದ ಸ್ಥಾನದಿಂದ ಗೌರಿ ಬನ್ನೂರು, ವಾರ್ಡ್ 149ರ ಕಸಬಾ-10ರಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ ಸ್ಥಾನದಿಂದ ವಿದ್ಯಾ ಗೌರಿ, ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಿರಿಸಿದ ಸ್ಥಾನದಿಂದ ಯಶೋಧ ಹರೀಶ್, ವಾರ್ಡ್ 25 ರಲ್ಲಿ ಕೆಮ್ಮಿಂಜೆ 1 ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಿರಿಸಿದ ಸ್ಥಾನದಿಂದ ರೋಹಿಣಿ ರಾಗಿದಕುಮೇರು ನಾಮಪತ್ರ ಸಲ್ಲಿಸಿದ್ದಾರೆ. 

ಜೆಡಿಎಸ್ ನಿಂದ ವಾರ್ಡ್8ರ ಚಿಕ್ಕಮುಡ್ನೂರು 2ರಲ್ಲಿ ಹಿಂದುಳಿದ ವರ್ಗ ಎ ಗೆ ಮೀಸಲಿರಿಸಿದ ಸ್ಥಾನದಿಂದ ಅದ್ದು ಪಡೀಲ್, ಎಸ್‍ಡಿಪಿಐ ಪಕ್ಷದಿಂದ ವಾರ್ಡ್ 5 ಬನ್ನೂರು 2ರಲ್ಲಿ ಹಿಂದುಳಿದ ವರ್ಗ(ಎ) ಮಹಿಳಗೆ ಮೀಸಲಿರಿಸಿದ ಸ್ಥಾನದಿಂದ ಫಾತಿಮತ್ ಝೌರ ಮತ್ತು ಶಕೀನಾ, ವಾರ್ಡ್ 8ರ ಚಿಕ್ಕಮುಡ್ನೂರು 2ರಲ್ಲಿ ಹಿಂದುಳಿದ ವರ್ಗ ಗೆ ಮೀಸಲಿರಿದ ಸ್ಥಾನದಿಂದ ಅಬ್ದುಲ್ ಲತೀಫ್ ಸಾಲ್ಮರ, ವಾರ್ಡ್28ರ ಕೆಮ್ಮಿಂಜೆರ 4ರಲ್ಲಿ ಸಾಮಾನ್ಯ ಸ್ಥಾನಕ್ಕೆ ಮೀಸಲಿರಿಸಿದ ಕ್ಷೇತ್ರದಿಂದ ಯಾಹ್ಯಾ ಕೂರ್ನಡ್ಕ ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿಗಳಾಗಿ ವಾರ್ಡ್ 24ರಲ್ಲಿ ಹಿಂದುಳಿದ ವರ್ಗ `ಎ'ಗೆ ಮೀಸಲಿರಿಸಿದ ಸ್ಥಾನದಿಂದ ಚಂದ್ರಶೇಖರ ಸಾಮೆತ್ತಡ್ಕ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ ವಾರ್ಡ್ 20ರಿಂದ ಹಾಲಿ ಸದಸ್ಯೆ ಸ್ವರ್ಣಲತಾ ಹೆಗ್ಡೆ ಉರ್ಲಾಂಡಿಯವರು ನಾಮಪತ್ರ ಸಲ್ಲಿಸಿದ್ದರು. 
ನಾಮಪತ್ರ ಸಲ್ಲಿಸಲು ನಗರ ಸಭಾ ಕಛೇರಿಯಲ್ಲಿ ಪ್ರತ್ಯೇಕ ಕೊಠಢಿಗಳನ್ನು ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಾಮಪತ್ರ ಸಲ್ಲಿಸಲು ಆ.17 ಅಂತಿಮ ದಿನವಾಗಿದೆ. ಆ.18ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಆ.20 ಕೊನೆಯ ದಿನವಾಗಿದ್ದು ಆ.29ರಂದು ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News