×
Ad

ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ವಯನಾಡ್‌ಗೆ ಪರಿಹಾರದ ಕಿಟ್ : ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್

Update: 2018-08-16 19:14 IST

ಮಂಗಳೂರು, ಆ.16: ಭಾರೀ ಮಳೆಯಿಂದ ತತ್ತರಿಸಿರುವ ಕೇರಳದ ವಯನಾಡ್ ಜಿಲ್ಲೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯು ಪರಿಹಾರದ ಕಿಟ್ ಪೂರೈಕೆ ಮಾಡಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಪರಿಹಾರದ ನಿಟ್ಟಿನಲ್ಲಿ ಕೇರಳದ ವಯನಾಡ್ ಜಿಲ್ಲಾಧಿಕಾರಿಯೊಂದಿಗೆ ನಿಕಟ ಸಂಪರ್ಕದಲ್ಲಿರಲು ದ.ಕ.ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯ ಸೂಚನೆಯ ಮೇರೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯು ವಿಧಾನ ಪರಿಷತ್ ಸದಸ್ಯ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಡಿಸಿಸಿ ಮಾಜಿ ಅಧ್ಯಕ್ಷ ರಮಾನಾಥ ರೈಯ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳು, ಬಟ್ಟೆಬರೆ ಇತ್ಯಾದಿಯನ್ನೊಳಗೊಂಡ ಕಿಟ್ ಹಸ್ತಾಂತರಿಸಲು ಸಿದ್ಧತೆ ನಡೆಸಿದೆ. ಅದಕ್ಕಾಗಿ ಡಿಸಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಅನ್ನು ಕೂಡಾ ಸ್ಥಾಪಿಲಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News