×
Ad

ಟ್ಯಾಲೆಂಟ್ ವತಿಯಿಂದ ಕೇರಳ ನೆರೆ ಪೀಡಿತರಿಗೆ ಆಹಾರ ಸಾಮಾಗ್ರಿ ವಿತರಣೆ

Update: 2018-08-16 20:44 IST

ಮಂಗಳೂರು,ಆ.16, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಕೇರಳ ನೆರೆ ಪೀಡತರಿಗೆ ಆಹಾರ ಸಾಮಾಗ್ರಿಗಳಾದ ಅಕ್ಕಿ ಮತ್ತು ಬೇಳೆ ವಿತರಣಾ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಮಾತಾಡಿದ ಸ್ನೇಹಾಲಯದ ಸ್ಥಾಪಕ ಜೋಸೆಫ್ ಕ್ರಾಸ್ತಾ 'ಕೇರಳದಲ್ಲಿ ನೆರೆಯಿಂದಾಗಿ ಬಹಳಷ್ಟು ಮಂದಿ ನಿರಾಶ್ರಿತರಾಗಿ ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಅಂತವರಿಗೆ ಸಹಾಯ ಮಾಡುವುದು ನಿಜಕ್ಕೂ ಪುಣ್ಯ ಕಾರ್ಯ. ಆಹಾರ ಸಾಮಾಗ್ರಿಗಳನ್ನು ಕೇರಳದ ನೆರೆಪೀಡಿತ ವಯನಾಡು ಮತ್ತು ಮಲಪ್ಪುರಂ ಜಿಲ್ಲೆಯ ನಿರಾಶ್ರಿತ ಕೇಂದ್ರಗಳಿಗೆ ತಲುಪಿಸಲಾಗುವುದು' ಎಂದರು. 

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮನ್ಸೂರ್ ಅಹ್ಮದ್ ಆಝಾದ್ ಗ್ರೂಪ್, ಅಬ್ದುಲ್ಲ ಮೋನು ಕತಾರ್, ಅಹಮದ್ ಶರೀಫ್, ಫಾತಿಮಾ ಟ್ರೇಡರ್ಸ್, ಫತೇ ಮುಹಮ್ಮದ್ ಪುತ್ತಿಗೆ, ಪುತ್ತಿಗೆ ಬಿಲ್ಡರ್ಸ್, ಸುಲೈಮಾನ್ ಶೇಖ್ ಬೆಳುವಾಯಿ, ವಿಶ್ವಾಸ್ ಎಸ್ಟೇಟ್ಸ್, ಸ್ನೇಹಾಲಯದ ಸ್ಥಾಪಕ ಜೋಸೆಫ್ ಕ್ರಾಸ್ತಾ, ಕೃಷಿಕ ಚಂದ್ರಣ್ಣ ಸೂರಲ್ಪಾಡಿ, ನಂಡೆ ಪೆಂಙಳ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಝೊರಾನ್ ಸಯ್ಯದ್, ಬ್ಯಾರೀಸ್ ಕಲ್ಚರಲ್ ಫೋರಮ್ ದುಬೈ ವಿದ್ಯಾರ್ಥಿವೇತನ ಸಮಿತಿಯ ಅಧ್ಯಕ್ಷ ಎಂ.ಇ ಮೂಳೂರು, ಬಿ.ಸಿ.ಎಫ್ ಉಪಾಧ್ಯಕ್ಷರುಗಳಾದ ಅಬ್ದುಲ್ ಲತೀಫ್ ಮುಲ್ಕಿ, ಅಮೀರುದ್ದೀನ್ ಎಸ್.ಐ, ಸಂಚಾಲಕ ಬಿ.ಎ ನಝೀರ್, ಅಬ್ದುಲ್ ರಹಿಮಾನ್ ಸಜಿಪ, ಗಫೂರ್, ರಫೀಕ್, ಬಿಸಿಸಿಐ ಆಡಳಿತಾಧಿಕಾರಿ ಖಾಲಿದ್ ತಣ್ಣೀರುಬಾವಿ, ಬ್ಯಾರಿ ಝುಲ್ಫಿ, ದಾವೂದು ವಳವೂರು ಮೊದಲಾದವರು ಉಪಸ್ಥಿತರಿದ್ದರು. ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ ನಕಾಶ್ ಬಾಂಬಿಲ ಧನ್ಯವಾದಗೈದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News