×
Ad

​'ದ ಮೊಬೈಲ್ ಗ್ಯಾಲರಿ' ಶೋರೂಂ ಶುಭಾರಂಭ

Update: 2018-08-16 20:56 IST

ಮಂಗಳೂರು, ಆ.16: ನ್ಯೂ ಪ್ಲಾನೆಟ್ ಜೀಯವರ 'ದ ಮೊಬೈಲ್ ಗ್ಯಾಲರಿ' ಶೋರೂಂ ನಗರದ ಪಿ.ಎಂ. ರಾವ್ ರಸ್ತೆಯಲ್ಲಿರುವ ಹಂಪನಕಟ್ಟೆ ಅಂಚೆ ಕಚೇರಿಯಿಂದ ಮುಂಭಾಗದಲ್ಲಿರುವ ಪೈಲ್ಯಾಂಡ್ ಬಿಲ್ಡಿಂಗ್ ಕಂಡೋಮಿನಿಯಮ್ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮ್ಯಾಟ್ರಿಕ್ಸ್ ಗ್ರೂಪ್‌ನ ಮಾಲಕ ರಾಜೇಂದ್ರಕುಮಾರ್, ವಿಶ್ವಾಸವು ಫಲ ಕೊಡುತ್ತದೆ ಎಂಬ ಭಾವನೆಯೊಂದಿಗೆ ಈ ಸಂಸ್ಥೆ ಕಾರ್ಯೋನ್ಮುಖವಾಗಬೇಕು. ಇದರಿಂದ ಸಂಸ್ಥೆ ಮತ್ತು ಗ್ರಾಹಕರಿಗೆ ಸಂತೃಪ್ತಿ ಲಭಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯೆನೆಯೊಯ ವಿವಿ ಚಾನ್ಸಲರ್ ಯೆನೆಪೊಯ ಅಬ್ದುಲ್ಲಾ ಕುಂಞಿ, ಡಿಸಿಪಿ ಹನುಮಂತರಾಯ, ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಸಿ.ಎಂ. ತಿಮ್ಮಯ್ಯ, ಕಾರ್ಪೊರೇಟರ್ ಪ್ರವೀಣಚಂದ್ರ ಆಳ್ವ ಉಪಸ್ಥಿತರಿದ್ದರು.

ಮೊಗನಾಡು ಜನಾರ್ದನ ಭಟ್ ಮಾತನಾಡಿದರು. ಭಾರತ್ ಪೆಟ್ರೋಲಿಯಂ ಪಂಪ್ ಮಾಲಕ ಸುಧೀರ್ ಭಂಡಾರಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಸಂಸ್ಥೆಯ ಮಾಲಕ ಕೆ.ಗುರುದತ್ ಕಾಮತ್, ಕೆ.ರಾಹುಲ್ ಕಾಮತ್, ರತುಲ್ ಕಾಮತ್, ಹಿತೈಷಿ ಕೆ. ಗೋಪಿನಾಥ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News