ಮಾಜಿ ಪ್ರಧಾನಿ ವಾಜಪೇಯಿ ನಿಧನ :ಶಾಸಕ ರಾಜೇಶ್ ನಾಯ್ಕ್ ಸಂತಾಪ
Update: 2018-08-16 20:59 IST
ಬಂಟ್ವಾಳ,ಆ.16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ವಾಜಪೇಯಿಯವರು ಹಿರಿಯ ಮುತ್ಸದ್ಧಿಯಾಗಿದ್ದು, ನನ್ನ ಸಹಿತ ಅಸಂಖ್ಯಾತ ಕಾರ್ಯಕರ್ತರಿಗೆ ರಾಜಕೀಯ ಬದುಕಿನ ಪ್ರೇರಣಾ ಶಕ್ತಿಯಾಗಿದ್ದವರು. ಬಾಲ್ಯದಿಂದಲೇ ನಮ್ಮೆಲ್ಲರನ್ನೂ ಸಾರ್ವಜನಿಕ ಬದುಕಿನೆಡೆಗೆ ನಡೆಯಲು ಸ್ಫೂರ್ತಿ ತುಂಬಿದ ವಾಜಪೇಯಿಯವರ ನಿಧನದಿಂದ ಪಕ್ಷ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.