ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂಗರಗುಂಡಿ ಇದರ ವತಿಯಿಂದ 72ನೆ ಸ್ವಾತಂತ್ರ್ಯೋತ್ಸವ ಆಚರಣೆ

Update: 2018-08-16 17:34 GMT

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂಗರಗುಂಡಿ ಬ್ರಾಂಚ್ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವವನ್ನು ಅಂಗರಗುಂಡಿಯ ಶಹೀದ್ ಅಕ್ಬರ್ ಸ್ಮಾರಕ ಬಸ್ ನಿಲ್ದಾಣದ ಬಳಿ ಆಚರಿಸಲಾಯಿತು.

ಎಸ್.ಡಿ.ಪಿ.ಐ. ಅಂಗರಗುಂಡಿ ಬ್ರಾಂಚ್ ಅಧ್ಯಕ್ಷ ರಫೀಕ್ ಅಂಗರಗುಂಡಿ ಅಧ್ಯಕ್ಷತೆ ವಹಿಸಿದ್ದರು. ಮುಹ್ಯಿದ್ದೀನ್ ಜುಮ್ಮಾ ಮಸೀದಿ ಬೈಕಂಪಾಡಿ ಖತೀಬ್ ಉಸ್ತಾದ್ ಹೈದರಾಲಿ ಸಖಾಫಿ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಪಿ.ಐ. ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಜಮಾಲ್ ಜೋಕಟ್ಟೆ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮುಹ್ಯಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಎಸ್.ಡಿ.ಪಿ.ಐ. ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕರ್ ಕುಲಾಯಿ, ಎಸ್.ಡಿ.ಪಿ.ಐ. ಸುರತ್ಕಲ್ ವಲಯಾಧ್ಯಕ್ಷ ಸಲಾಂ ಕಾನ, ಪಾಪ್ಯುಲರ್ ಫ್ರಂಟ್ ಅಂಗರಗುಂಡಿ ಅಧ್ಯಕ್ಷ ಸಿದ್ದೀಕ್ ಅಂಗರಗುಂಡಿ ಮತ್ತು ಊರಿನ ಹಿರಿಯರು, ಎಸ್.ಡಿ.ಪಿ.ಐ. ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸೆಸೆಲ್ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮೂವರು ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News