ಟ್ವಿಟರ್ ನಿಷೇಧ: ಪಾಕ್ ಟೆಲಿಕಾಂ ಪ್ರಾಧಿಕಾರ ಎಚ್ಚರಿಕೆ

Update: 2018-08-16 17:42 GMT

ಇಸ್ಲಾಮಾಬಾದ್, ಆ. 16: ಆಕ್ಷೇಪಾರ್ಹ ವಿಷಯಗಳನ್ನು ತಡೆಯಬೇಕೆಂಬ ತನ್ನ ಸೂಚನೆಯನ್ನು ಪಾಲಿಸಲು ಟ್ವಿಟರ್ ವಿಫಲವಾದರೆ, ಅದನ್ನು ನಿಷೇಧಿಸಬಹುದಾಗಿದೆ ಎಂದು ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ ಎಚ್ಚರಿಸಿದೆ.

ಆಕ್ಷೇಪಾರ್ಹ ವಿಷಯಗಳನ್ನು ತಡೆಯಬೇಕು ಎಂಬ ತನ್ನ ಮನವಿಯನ್ನು ಫೇಸ್‌ಬುಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳು ಪಾಲಿಸಿವೆ, ಆದರೆ ಟ್ವಿಟರ್ ಪಾಲಿಸಿಲ್ಲ ಎಂಬುದಾಗಿ ಪ್ರಾಧಿಕಾರವು ಬುಧವಾರ ಸಂಪುಟ ಕಾರ್ಯಾಲಯ ಕುರಿತ ಸೆನೆಟ್ ಸ್ಥಾಯಿ ಸಮಿತಿಗೆ ತಿಳಿಸಿದೆ ಎಂದು ‘ಡಾನ್ ನ್ಯೂಸ್’ ಗುರುವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News