ಉಳ್ಳಾಲದಲ್ಲಿ ಕಡಲ್ಕೊರೆತ: ಹಲವು ಮನೆಗಳಿಗೆ ಹಾನಿ
Update: 2018-08-16 23:30 IST
ಉಳ್ಳಾಲ,ಆ.16: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಉಳ್ಳಾಲ ಪ್ರದೇಶದ ಹಲೆವೆಡೆ ಕಡಲ್ಕೊರೆತ ಮತ್ತೆ ಆರಂಭಗೊಂಡಿದ್ದು ಎರಡು ಮನೆಗಳಿಗೆ ಹಾನಿಯಾಗಿದ್ದು ಹಲವು ಮನೆಗಳು ಅಪಾಯದಂಚಿನಲ್ಲಿದೆ.
ಉಳ್ಳಾಲ ಹಿಲೇರಿಯಾನಗರದ ನೆಬಿಸಾ ಹಾಗೂ ಝೊಹರಾ ಎಂಬವರ ಮನೆಗೆ ಕಡಲಿನ ಅಲೆಗಳು ಅಪ್ಪಲಿಸಿ ಅಪಾರ ಹಾನಿಯಾಗಿದೆ. ಅಲ್ಲದೆ ಈ ಪ್ರದೇಶದ ಹಲವಾರು ಮನೆಗಳು ಅಪಾಯದಂಚಿನಲ್ಲಿದೆ.
ಕಡಲ್ಕೊರೆತ ಪ್ರದೇಶಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಭೇಟಿ ಪರಿಶೀಲನೆ ನಡೆಸಿದರು.