ಕಲ್ಲಡ್ಕ ಜುಮಾ ಮಸೀದಿ ಚುನಾವಣೆ: ಹಾಜಿ ಜಿ ಅಬೂಬಕ್ಕರ್ ತಂಡಕ್ಕೆ ಗೆಲುವು

Update: 2018-08-16 18:16 GMT

ವಿಟ್ಲ ,ಆ.16: ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರ ಚುನಾವಣೆ ಗುರುವಾರ ಇಲ್ಲಿನ ಮದ್ರಸ ಹಾಲ್ ನಲ್ಲಿ ನಡೆಯಿತು. ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಯು ಒಟ್ಟು 21 ಸದಸ್ಯ ಬಲವನ್ನು ಹೊಂದಿದ್ದು, 48 ಮಂದಿ ನಾಮಪತ್ರ ಸಲ್ಲಿಸಿದ್ದರು.
ಒಂದನೇ ತಂಡದಿಂದ 21 ಮಂದಿ, ಎರಡನೇ ತಂಡದಿಂದ 14 ಮಂದಿ,  ಮೂರನೇ ತಂಡದಿಂದ 10 ಮಂದಿ ಹಾಗೂ ಮೂವರು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. 

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ನಿಕಟಪೂರ್ವ ಅಧ್ಯಕ್ಷ ಹಾಜಿ ಜಿ. ಅಬೂಬಕ್ಕರ್ ನೇತೃತ್ವದ ಒಂದನೇ ತಂಡದಿಂದ ಸ್ಪರ್ಧಿಸಿದ್ದ 21 ಮಂದಿ ಅಭ್ಯರ್ಥಿಗಳ ಪೈಕಿ 20 ಮಂದಿ ಆಯ್ಕೆಯಾಗುವ ಮೂಲಕ ಗೆಲುವು ಸಾಧಿಸಿದ್ದಾರೆ. ಮೂರನೇ ತಂಡದಿಂದ ಕೆ.ಎಚ್. ಜವಾಝ್ ಆಯ್ಕೆಯಾಗಿದ್ದಾರೆ. ಎರಡನೇ ತಂಡದಲ್ಲಿ ಸ್ಪರ್ಧಿಸಿದ್ದ 14 ಮಂದಿ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. 

ವಕ್ಫ್ ಇಲಾಖೆಯ ಲೆಕ್ಕ ಪರಿಶೋಧಕ ನಝೀರ್ ಅಹಮದ್ ಚುನಾವಣಾಧಿಕಾರಿಯಾಗಿ, ನಿವೃತ್ತ ಪೊಲೀಸ್ ಉಪ ನಿರೀಕ್ಷಕ ವಿ. ಮುಹಮ್ಮದ್ ಹಾಜಿ ಉಪ ಚುನಾವಣಾಧಿಕಾರಿಯಾಗಿ ಹಾಗೂ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಎಂ. ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬಂಟ್ವಾಳ ನಗರ ಠಾಣಾ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ವಿಜೇತರು:
ಜಿ. ಅಬೂಬಕ್ಕರ್ ಹಾಜಿ, ಹಾಜಿ ಅಬೂಬಕ್ಕರ್ ಸಾಹೇಬ್, ಯೂಸುಫ್ ಹಾಜಿ ಅಮರ್, ಹಾಜಿ ಕೆ.ಎಂ. ಇಸ್ಮಾಯಿಲ್, ಅಬ್ದುಲ್ ಹಮೀದ್ ಕೆ., ಜಿ.ಎಸ್. ಅಬ್ಬಾಸ್,  ಹುಸೈನ್, ಹಾಜಿ ಜಿ. ಅಹಮದ್ ಯೂಸುಫ್, ಬಿ.ಎಂ‌. ಸಾದಿಕ್, ಹಾಜಿ ಮುಹಮ್ಮದ್ ಶಾಫಿ, ಅಬೂಬಕ್ಕರ್, ಪಿ.ಕೆ. ನವಾಝ್, ಜಿ. ಅಬ್ದುಲ್ ಹಮೀದ್, ಯು.ಕೆ‌‌. ಶೇಖಬ್ಬ, ಜಿ.ಕೆ. ಅಬೂಬಕ್ಕರ್, ಜಿ.ಎ. ಮೊಯಿದಿನ್, ಅಬ್ದುಲ್ ಹಮೀದ್, ಕೆ.ಎಚ್. ನವಾಝ್, ಮುಹಮ್ಮದ್ ಝಕರಿಯಾ, ಅಬ್ದುಲ್ ಕಾಸಿಂ, ಅಬ್ದುಲ್ ರಝಾಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News