ರೈಫಲ್‌ಮನ್ ಔರಂಗಜೇಬರ ಹೆತ್ತವರಿಂದ ಇಂದೋರಿನಲ್ಲಿ ರಾಷ್ಟ್ರಧ್ವಜಾರೋಹಣ

Update: 2018-08-16 18:14 GMT

ಇಂದೋರ(ಮ.ಪ್ರ),ಆ.16: ಇತ್ತೀಚಿಗೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಯೋಧ ಔರಂಗಜೇಬ್ ಅವರ ಹೆತ್ತವರು ಬುಧವಾರ ಇಲ್ಲಿಯ ರೀಗಲ್ ಚೌಕ್‌ನಲ್ಲಿ ಸ್ಥಳೀಯ ಸಂಸ್ಥೆ ಅಪ್ನಾ ಸಮೂಹ್ ಆಯೋಜಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ರಾಷ್ಟ್ರಧ್ವಜವನ್ನು ಅರಳಿಸಿದರು. 44 ರಾಷ್ಟ್ರೀಯ ರೈಫಲ್ಸ್‌ನಲ್ಲಿ ರೈಫಲ್‌ಮನ್ ಆಗಿದ್ದ ಔರಂಗಜೇಬ್ ಜೂ.14ರಂದು ಈದ್‌ಗೆಂದು ಮನೆಗೆ ಮರಳುತ್ತಿದ್ದಾಗ ಪುಲ್ವಾಮದಲ್ಲಿ ಅವರನ್ನು ಅಪಹರಿಸಿದ್ದ ಭಯೋತ್ಪಾದಕರು ಬಳಿಕ ಕೊಂದು ಹಾಕಿದ್ದರು. ಅವರನ್ನು ಈ ಬಾರಿಯ ಶೌರ್ಯಚಕ್ರ ಪ್ರಶಸಿಗೆ ಮರಣೋತ್ತರವಾಗಿ ನಾಮಕರಣ ಮಾಡಲಾಗಿದೆ.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಔರಂಗಜೇಬರ ತಂದೆ ಮುಹಮ್ಮದ್ ಹನೀಫ್ ಮತ್ತು ತಾಯಿ ರಾಝ್ ಬೇಗಂ ಅವರು,ದೇಶಕ್ಕಾಗಿ ತಮ್ಮ ಪುತ್ರನ ಬಲಿದಾನ ತಮಗೆ ಹೆವ್ಮೆುಯನ್ನುಂಟು ಮಾಡಿದೆ ಎಂದರು.

ಔರಂಗಜೇಬ್ ಇಡೀ ದೇಶದ ಪುತ್ರನಾಗಿದ್ದ ಮತ್ತು ಆತನ ಬಲಿದಾನ ನಮಗೆ ಹೆಮ್ಮೆಯನ್ನು ತಂದಿದೆ. ಆತನ ಬಲಿದಾನವನ್ನು ಶೌರ್ಯಚಕ್ರ ಪ್ರಶಸ್ತಿಯೊಂದಿಗೆ ಗೌರವಿಸುತ್ತಿರುವುದಕ್ಕಾಗಿ ನಾವು ಸರಕಾರಕ್ಕೆ ಕೃತಜ್ಞರಾಗಿದ್ದೇವೆೆ ಎಂದು ಹನೀಫ್ ತಿಳಿಸಿದರು.

   ನನ್ನ ಪುತ್ರ ತನ್ನ ತ್ಯಾಗಕ್ಕೆ ಶೌರ್ಯಚಕ್ರ ಪಡೆಯುತ್ತಿರುವದು ನನಗೆ ಖುಷಿ ನೀಡಿದೆ. ದೇಶಕ್ಕಾಗಿ ಏನಾದರೂ ಮಾಡಲು ಬಯಸಿದ್ದೇನೆ ಎಂದು ಆತ ಹೇಳುತ್ತಿದ್ದ,ಹುತಾತ್ಮನಾಗುವ ಮೂಲಕ ಆತ ತನ್ನ ಮಾತು ಉಳಿಸಿಕೊಂಡಿದ್ದಾನೆ ಎಂದು ರಾಝ್ ಬೇಗಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News