ಸಾಮರಸ್ಯ ಬದುಕು ಅಗತ್ಯ: ತ್ವಾಹಾ ಸಅದಿ

Update: 2018-08-17 11:44 GMT

ಬಂಟ್ವಾಳ, ಆ.17: ಹಿರಿಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅದನ್ನು ಸದೃಡ ಪಡಿಸಲು ಸಾಮರಸ್ಯದ ಬಾಳ್ವೆ ಅಗತ್ಯ ಎಂದು ಅಜಿಲಮೊಗರು ಧರ್ಮಗುರು ಪಿ.ಎಸ್. ತ್ವಾಹಾ ಸಅದಿ ಅಭಿಪ್ರಾಯಪಟ್ಟರು.

ಸ್ವಾತಂತ್ರೋತ್ಸವದ ಅಂಗವಾಗಿ ಬಂಟ್ವಾಳ ಸಮೀಪದ ಅಜಿಲಮೊಗರಿನಲ್ಲಿ ಬುಧವಾರ ಹ.ಸ ಬಾಬಾ ಫಕ್ರುದ್ದೀನ್ ಜುಮಾ ಮಸ್ಜಿದ್, ಬಾಬಾ ಫಕ್ರುದ್ದೀನ್ ದರ್ಸ್ ಹಾಗೂ ಮದ್ರಸ ವತಿಯಿಂದ ಅಜಿಲಮೊಗರು ಮಸ್ಜಿದ್ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ಸಂದೇಶವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಸಿದ ಮುಝಮ್ಮಿಲ್ ಸಖಾಫಿ ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿಯನ್ನು ವಿವರಿಸಿದರು. ಸರಪಾಡಿ ಪ್ರೌಢ ಶಾಲಾ ಮುಖ್ಯೋಪಾದ್ಯಯರಾದ ಉದಯ್ ಮಾಸ್ಟರ್, ಕುಟ್ಟಿಕಳ ಅಧ್ಯಾಪಕರಾದ ರವಿ ಮಾಸ್ಟರ್, ಕೋಶಾಧಿಕಾರಿ ಮುಹಮ್ಮದ್ ಕುಂಞಿ ಹಾಜಿ ಮಾತಾಡಿದರು. ನಂತರ ಹ.ಸ.ಬಾಬಾ ಫಕ್ರುದ್ದೀನ್ ದರ್ಸ್ ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳು, ವಿವಿಧ ಭಾಷೆಗಳಲ್ಲಿ ಭಾಷಣ ಮುಂತಾದ ಸಾಂಸ್ಕೃತಿಕ  ಕಾರ್ಯಕ್ರಮಗಳ ಮೂಲಕ ಸಮಾಪ್ತಿಗೊಂಡಿತು.

ಕಬೀರ್ ಅಹ್ಸನಿ ಹಾಗೂ ಆಡಳಿತ ಸಮಿತಿಯ ಸದಸ್ಯರು ದರ್ಸ್ ವಿದ್ಯಾರ್ಥಿಗಳು ಹಾಗೂ ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಾಸಿರ್ ಪದವು ಸ್ವಾಗತಿಸಿ, ಜುನೈದ್ ಕೊಪ್ಪ ವಂದಿಸಿದರು. ಆದಂ ಅಬ್ದುಲ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News