ಮುಲ್ಲಪೆರಿಯಾರ್ ನೀರಿನ ಮಟ್ಟ 139 ಅಡಿಗೆ ಇಳಿಸಲು ವಿಧಾನ ಅನ್ವೇಷಣೆಗೆ ಎನ್‌ಸಿಎಂಸಿಗೆ ಸುಪ್ರೀಂ ಕೋರ್ಟ್ ಸೂಚನೆ

Update: 2018-08-17 14:12 GMT

ಹೊಸದಿಲ್ಲಿ, ಆ. 17: ಕೇರಳದಲ್ಲಿ ತೀವ್ರ ನೆರೆ ಹಿನ್ನೆಲೆಯಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವನ್ನು 139 ಅಡಿಗೆ ಇಳಿಸಲು ವಿಧಾನಗಳನ್ನು ಪರಿಶೋಧಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಹಾಗೂ ಉಪ ಸಮಿತಿಗೆ ಸೂಚಿಸಿದೆ. ಪುನರ್ವಸತಿ ಹಾಗೂ ನೀರಿನ ಮಟ್ಟ ಕಡಿತ ಕುರಿತು ಎನ್‌ಸಿಎಂಸಿಯ ನಿರ್ದೇಶನಕ್ಕೆ ಬದ್ಧವಾಗಿರುವಂತೆ ಸುಪ್ರೀಂ ಕೋರ್ಟ್ ಕೇರಳ ಹಾಗೂ ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದೆ. ಜನರಿಗೆ ತೊಂದರೆ ಉಂಟಾಗದೇ ಇರಲು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ವಿಪತ್ತ ನಿರ್ವಹಣೆ ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀ ಕೋರ್ಟ್ ಕೇರಳಕ್ಕೆ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News