ವಾಜಪೇಯಿ ಭಾರತ-ಅಮೆರಿಕ ಭಾಗೀದಾರಿಕೆಯ ಆರಂಭಿಕ ರೂವಾರಿ: ಅಮೆರಿಕ

Update: 2018-08-17 14:21 GMT

ವಾಶಿಂಗ್ಟನ್, ಆ. 17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಅಮೆರಿಕ ಶುಕ್ರವಾರ ಸಂತಾಪ ವ್ಯಕ್ತಪಡಿಸಿದೆ.

ಭಾರತ ಮತ್ತು ಜಗತ್ತಿನ ಅನುಕೂಲಕ್ಕಾಗಿ ಭಾರತ ಮತ್ತು ಅಮೆರಿಕಗಳು ಭಾಗೀದಾರಿಕೆಯೊಂದನ್ನು ಬೆಳೆಸಬಹುದು ಎಂಬುದನ್ನು ಆರಂಭದಲ್ಲಿ ಗುರುತಿಸಿದ ಕೆಲವರ ಪೈಕಿ ವಾಜಪೇಯಿ ಒಬ್ಬರು ಎಂದು ಅದು ಹೇಳಿದೆ.

‘‘2000ದಲ್ಲಿ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಮುಂದೆ ನಿಂತ ಅವರು, ಅಮೆರಿಕ-ಭಾರತ ಸಂಬಂಧವನ್ನು ‘ಸಮಾನ ಪ್ರಯತ್ನಗಳ ಸಹಜ ಭಾಗೀದಾರಿಕೆ’ ಎಂಬುದಾಗಿ ಬಣ್ಣಿಸಿದ್ದರು’’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸಂಬಂಧ ಸುಧಾರಣೆಗೆ ಯತ್ನಿಸಿದ್ದರು: ಪಾಕ್

ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ನಿಧನಕ್ಕೆ ಪಾಕಿಸ್ತಾನ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದೆ.

‘‘ಅಟಲ್ ಬಿಹಾರಿ ವಾಜಪೇಯಿಯ ಸಾವಿನ ಸುದ್ದಿ ಕೇಳಿ ನಮಗೆ ದುಃಖವಾಗಿದೆ’’ ಎಂದು ಪಾಕಿಸ್ತಾನದ ವಿದೇಶ ಕಚೇರಿ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಖ್ಯಾತ ಮುತ್ಸದ್ದಿಯಾಗಿದ್ದ ವಾಜಪೇಯಿ ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಬದಲಾವಣೆ ತರಲು ಯತ್ನಿಸಿದ್ದರು ಹಾಗೂ ‘ಸಾರ್ಕ್’ ಸಂಘಟನೆ ಮತ್ತು ಪ್ರಾದೇಶಿಕ ಸಹಕಾರದ ಪ್ರಮುಖ ಬೆಂಬಲಿಗರಾಗಿದ್ದರು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News