ಉಡುಪಿ ಜಿಲ್ಲಾಡಳಿತದ ನೇತೃತ್ವದಲ್ಲಿ ಕೇರಳ ಪುನರ್ವಸತಿ ಕೇಂದ್ರಗಳಿಗೆ ವಸ್ತುಗಳ ಸಂಗ್ರಹ

Update: 2018-08-17 14:31 GMT

ಉಡುಪಿ, ಆ.17: ಉಡುಪಿ ಜಿಲ್ಲಾಡಳಿತವು ರೋಟರಿ ಕ್ಲಬ್ ಮಣಿಪಾಲ ಹಿಲ್ಸ್, ಎಂಐಟಿ ರೋಟರಾಕ್ಟ್ ಕ್ಲಬ್ ಮತ್ತು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಕೇರಳದ ಪುನರ್ವಸತಿ ಕೇಂದ್ರಗಳಿಗೆ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅವುಗಳನ್ನು ಇಂಡಿಯನ್ ಕೋಸ್ಟ್ ಗಾರ್ಡ್ ವಿಮಾನಗಳ ಮೂಲಕ ಮುಂದಿನ ವಾರ ಕಳುಹಿಸಿಕೊಡಲಿದೆ.

ಮಣಿಪಾಲ ಮಣ್ಣಪಳ್ಳದ ರೋಟರಿ ಹಾಲ್‌ನಲ್ಲಿರುವ ವಿಪತ್ತು ನಿವಾರಣಾ ಸಂಗ್ರಹ ಕೇಂದ್ರ ಮತ್ತು ಮಣಿಪಾಲ ಬಸ್ ನಿಲ್ದಾಣ ಸಮೀಪದ ಟೈಗರ್ ಸರ್ಕಲ್ ವಾಟರ್ ಪೌಂಟೆನ್ ಬಳಿಯ ಕೆಎಂಸಿ ಕಚೇರಿಯ ಸಿಬ್ಬಂದಿಗಳ ಕೊಠಡಿಯಲ್ಲಿ ಆ.18ರಿಂದ 20ರವರೆಗೆ ಬೆಳಗ್ಗೆ 9ಗಂಟೆಯಿಂದ ಸಂಜೆ 7ಗಂಟೆ ವರೆಗೆ ದಾನಿಗಳು ಈ ಕೆಳಗೆ ತಿಳಿಸಿರು ವಸ್ತುಗಳನ್ನು ನೀಡಬಹುದಾಗಿದೆ.

ಅಗತ್ಯವಿರುವ ವಸ್ತುಗಳ ವಿವರ

ಚಾದರಗಳು(ಬೆಡ್‌ಶೀಟ್), ಚಾಪೆ ಗಳು(ಸ್ಲೀಪಿಂಗ್ ಮ್ಯಾಟ್ಸ್), ಹೊದಿಕೆಗಳು(ಬ್ಲಾಂಕೆಟ್ಸ್), ನೈಟಿಸ್, ಲುಂಗಿಗಳು, ಸ್ಥಾನದ ಟವೆಲ್, ಒಳ ಉಡುಪುಗಳು, ಮಕ್ಕಳ ಉಡುಪುಗಳು.

ಮಕ್ಕಳ ಶಾಲಾ ಕಿಟ್: ಶಾಲಾ ಚೀಲ, ಬರೆಯುವ ಪುಸ್ತಕಗಳು (ನೋಟ್ ಬುಕ್), ಪೆನ್ಸಿಲ್ ಬಾಕ್ಸಗಳು, ಪೆನ್ನುಗಳು.

ಪ್ಯಾಕ್ಡ್ ಆಹಾರಗಳು: ರಸ್ಕ್ (ಬ್ರೆಡ್ ಇರಬಾರದು), ಬಿಸ್ಕತ್ತುಗಳು(ಕ್ರೀಮ್ ಬಿಸ್ಕತ್ತು ಇರಬಾರದು), ನೀರು (ಇಪ್ಪತ್ತು ಲೀಟರ್ ಕ್ಯಾನ್ ಮಾತ್ರ), ಅಕ್ಕಿ, ಸಕ್ಕರೆ, ಉಪು, ಚಾ/ಕಾಫಿ ಪುಡಿ, ದ್ವಿದಳ ಧಾನ್ಯಗಳು, ಪ್ಯಾಕ್ಡ್ ಪ್ರೊವಿಶನ್ಸ್, ಒಆರ್‌ಎಸ್ ಪ್ಯಾಕೆಟ್‌ಗಳು/ ಇಲೆಕ್ಟ್ರೋಲೈಟ್ಸ್, ನೀರನ್ನು ಶುದ್ದೀಕರಿಸುವ ಕ್ಲೋರಿನ್ ಮಾತ್ರೆಗಳು, ಡೆಟಾಲ್‌ಗಳು, ಸೊಳ್ಳೆ ನಿವಾರಕಗಳು/ಒಡೋಮಸ್, ಆ್ಯಂಟಿ ಸಪ್ಟಿಕ್ ಲೋಶನ್, ಆ್ಯಂಟಿ ಫಂಗಲ್ ಪೌಡರ್, ಬ್ಲೀಚಿಂಗ್ ಪೌಡರ್ ಗಳು/ಲೈಮ್ ಪೌಡರ್‌ಗಳು, ಬೇಬಿ ಡೈಪರ್ಸ್, ಅಡಲ್ಟ್ ಡೈಪರ್ಸ್, ಸ್ಯಾನಿಟರಿ ನ್ಯಾಪ್‌ಕಿನ್ಸ್, ಟೂತ್ ಪೇಸ್ಟ್ ಗಳು, ಟೂತ್ ಬ್ರಶ್‌ಗಳು, ಶೌಚಾಲಯ ಸಾಬೂನುಗಳು, ಮೈ ಮತ್ತು ಬಟ್ಟೆ ತೊಳೆಯುವ ಸಾಬೂನುಗಳು, ಮೋಂಬತ್ತಿ ಗಳು, ಬೆಂಕಿ ಪೆಟ್ಟಿಗೆಗಳು.

ಬಳಸಿದ ವಸ್ತುಗಳನ್ನು ಸ್ವೀಕರಿಸಲಾಗುವುದಿಲ್ಲ. ಎಲ್ಲಾ ಬಟ್ಟೆಗಳು ಸಹ ಹೊಸದಾಗಿರಬೇಕು ಹಾಗೂ ಯಾವುದೇ ನಗದನ್ನು ಸ್ವೀಕರಿಸಲಾಗುವುದಿಲ್ಲ. ದೂರವಾಣಿ ಸಂಖ್ಯೆ: ಪ್ರೊ.ಮದ್ದೋಡಿ (9448229591), ಉಮೇಶ್ ಸಾಲಿ ಯಾನ್ (9844627000), ರುದ್ರ (9546783129), ಐಡಾ ಡಿಸೋಜ (7760093803), ಲೆನಾ ಅಶೋಕ್ (9448984732), ಶೃತಿ ( 94000 48735), ಆಶಿಶ್ (8197639736), ನಿಧಿ (966394020)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News