ನೆರೆ ಸಂತ್ರಸ್ತರಿಗೆ ಒಂದು ದಿನದ ವೇತನ, ಟಿಕೆಟ್ ಕಲೆಕ್ಷನ್ ಹಣ ನೀಡಲಿರುವ ಕಾಸರಗೋಡು ಖಾಸಗಿ ಬಸ್ ನೌಕರರು

Update: 2018-08-17 15:10 GMT

ಕಾಸರಗೋಡು, ಆ.17: ರಾಜ್ಯದಲ್ಲಿ ಉಂಟಾದ ಭಾರೀ ಪ್ರವಾಹದಲ್ಲಿ ಸಂತ್ರಸ್ತರ ನೆರವಿಗೆ ಕಾಸರಗೋಡು ಜಿಲ್ಲಾ ಖಾಸಗಿ ಬಸ್ಸು ಮಾಲಕರು ಮುಂದಾಗಿದ್ದು, ಒಂದು ದಿನದ ಎಲ್ಲಾ ಟಿಕೆಟ್ ಕಲೆಕ್ಷನ್ ಹಾಗೂ ನೌಕರರ ವೇತನವನ್ನು ಮುಖ್ಯಮಂತ್ರಿಯವರ ಸಂತ್ರಸ್ತ್ರರ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.

ಅದರಂತೆ ಆ.30ರಂದು ಜಿಲ್ಲೆಯ ಎಲ್ಲಾ ಖಾಸಗಿ ಬಸ್ಸುಗಳು ಸಂಚಾರ ನಡೆಸಿ ಲಭಿಸುವ ಎಲ್ಲಾ ಮೊತ್ತ ವನ್ನು ಪರಿಹಾರ ನಿಧಿಗೆ ನೀಡಲಾಗುವುದು ಎಂದು ಬಸ್ ಮಾಲಕರ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಗಿರೀಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಆ.30ರಂದು ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ರಿಯಾಯಿತಿ ದರ ನೀಡದೆ ಪೂರ್ಣ ಟಿಕೆಟ್ ಮೊತ್ತವನ್ನು ನೀಡಿ ಸಹಕರಿಸಬೇಕು. ಅದೇ ರೀತಿ ಇತರ ವಾಹನಗಳಲ್ಲಿ ತೆರಳುವ ಪ್ರಯಾಣಿಕರು ಅಂದು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿ ಸಹಾಯಧನಕ್ಕೆ ನೆರವಾಗುವಂತೆ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದ ಲ್ಲಿ ಸಚಿವರು ಹಾಗೂ ಶಾಸಕರ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಕೋಶಾಧಿಕಾರಿ ಪಿ.ಎ.ಮುಹಮ್ಮದ್ ಕುಂಞಿ, ಶಂಕರ ನಾಯ್ಕ್, ಎನ್.ಎಂ. ಹಸೈನಾರ್, ಸಿ.ಎ.ಮುಹಮ್ಮದ್ ಕುಂಞಿ, ಸಿ.ವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News