ಬಿಹಾರ ಆಶ್ರಯಧಾಮ ಅತ್ಯಾಚಾರ ಪ್ರಕರಣ: ಮಾಜಿ ಸಚಿವೆ ಮಂಜು ವರ್ಮಾ ನಿವಾಸಗಳಲ್ಲಿ ಸಿಬಿಐ ಶೋಧ

Update: 2018-08-17 15:41 GMT

ಹೊಸದಿಲ್ಲಿ, ಆ. 17: ಮುಝಾಫ್ಫರ್‌ಪುರ್ ಆಶ್ರಯ ಧಾಮದಲ್ಲಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರಿಗೆ ಸೇರಿದ ಐದು ನಿವಾಸಗಳಲ್ಲಿ ಸಿಬಿಐ ಶುಕ್ರವಾರ ಬೆಳಗ್ಗೆ ತನಿಖೆ ನಡೆಸಿತು.

 ಇದಲ್ಲದೆ ಐದು ಸ್ಥಳಗಳಲ್ಲಿ ಹಾಗೂ ಬ್ರಿಜೇಶ್ ಠಾಕೂರ್‌ಗೆ ಸೇರಿದ 7 ಸ್ಥಳಗಳಲ್ಲಿ ಸಿಬಿಐ ತನಿಖೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರ ಪಾಟ್ನಾದಲ್ಲಿರುವ ನಿವಾಸಗಳು ಹಾಗೂ ಮೊತಿಹಾರಿ, ಭಾಗಲ್ಪುರದಲ್ಲಿರುವ ತಲಾ ಒಂದು ನಿವಾಸದಲ್ಲಿ ತನಿಖೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರ ಆಶ್ರಯ ಧಾಮಕ್ಕೆ ಚಂಡೇಶ್ವರ್ ವರ್ಮಾ ಆಗಾಗ ಭೇಟಿ ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪತ್ನಿ ಮಂಜು ವರ್ಮಾ ಕಳದೆ ವಾರ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News