×
Ad

ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

Update: 2018-08-17 21:38 IST

ಮೂಡುಬಿದಿರೆ, ಅ.17: ವಾರದ ಹಿಂದೆ ತಮ್ಮನ ಜತೆ ಬೈಕ್‌ನಲ್ಲಿ ಮನೆಗೆಂದು ತೆರಳಿ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹವು ಶುಕ್ರವಾರ ಮರವೂರು ಅಣೆಕಟ್ಟಿನಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಈತನನ್ನು ಕೊಲೆ ಮಾಡಿ ನಂತರ ಶವವನ್ನು ನದಿಗೆ ಎಸೆದಿರಬಹುದು ಎಂದು ಅಂದಾಜಿಸಲಾಗಿದೆ.

ಹೊಸಬೆಟ್ಟು ಗ್ರಾಮದ ರತ್ನಾಕರ ಕಡಂಬ ಅವರ ಪುತ್ರ ಸುದರ್ಶನ್ ಜೈನ್ (28) ಮೃತರು. ಮೂಡುಬಿದಿರೆಯ ಬಟ್ಟೆ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಈತ ಎಂದಿನಂತೆ ಕಳೆದ ಶನಿವಾರ ರಾತ್ರಿ ಕೆಲಸ ಮುಗಿಸಿ ತನ್ನ ತಮ್ಮ ಸುಧೀರ್ ಜೈನ್ ಜತೆ ಬೈಕ್‌ನಲ್ಲಿ ತೆರಳಿದ್ದ. ಮನೆ ಹತ್ತಿರ ಕಾರೊಂದು ನಿಂತಿತ್ತೆನ್ನಲಾಗಿದ್ದು ಅಲ್ಲಿ ಸುಧೀರ್‌ನ ಸ್ನೇಹಿತ ಸಂದೀಪ್ ಮತ್ತಿಬ್ಬರು ಇದ್ದರೆನ್ನಲಾಗಿದೆ. ಅವರು ಸುದರ್ಶನನ್ನು ಅಪಹರಿಸಿ ಮಾರಕಾಯುಧದಿಂದ ಹೊಟ್ಟೆಗೆ ತಿವಿದು, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ನಂತರ ಪುಚ್ಚೆಮೊಗರು ಪಲ್ಗುಣಿ ನದಿಗೆ ಎಸೆದಿದ್ದಾರೆ ಎಂದು ದೂರಲಾಗದೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News