ಗಾಂಜಾ ಸೇವನೆ: ಐವರು ವಿದ್ಯಾರ್ಥಿಗಳು ವಶಕ್ಕೆ
Update: 2018-08-17 22:30 IST
ಮಣಿಪಾಲ, ಆ.17: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಆ.13ರಂದು ಐದು ಮಂದಿ ವಿದ್ಯಾರ್ಥಿಗಳನ್ನು ಸರಳೇಬೆಟ್ಟು ಎಂಬಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಶ್ವರ ನಗರದ ಹೈ ಪಾಯಿಂಟ್ ರೆಸಿಡೆನ್ಸಿಯ ಇರೇಶ್ ಕುಮಾರ್(20), ಶಾಹಬಾಜ್ ಮಹಮ್ಮದ್(23), ನಬೀಲ್ ಜುನೈದ್(21), ಉಜ್ವಲ್ ಉದಯ್(21) ಈಶ್ವರ ನಗರ ಶಾಂಭವಿ ಪ್ಯಾಲೇಸ್‌ನ ಶ್ಯಾಮ್ ಹರಿದಾಸ್ (20) ಎಂಬವರನ್ನು ವಶಕ್ಕೆ ಪಡೆದಿದ್ದು, ಇವರು ಗಾಂಜಾ ಸೇವಿಸಿರುವ ಬಗ್ಗೆ ವೈದ್ಯರು ದೃಢ ಪತ್ರ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.