ಉಡುಪಿ: ವಿದ್ಯಾರ್ಥಿಗಳಿಗೆ ಕಿರುಚಿತ್ರ ರಚನಾ ಸ್ಪರ್ಧೆ

Update: 2018-08-17 17:03 GMT

ಉಡುಪಿ, ಆ.17: ಉಡುಪಿ ಜಿಲ್ಲಾ ಪೋಲಿಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚಾರಣೆ ಪ್ರಯುಕ್ತ ಪಿಯುಸಿ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಪರಿಣಾಮ ಮತ್ತು ಜಾಗೃತಿ ಕುರಿತ ಕಿರುಚಿತ್ರ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಕಿರುಚಿತ್ರ ಸ್ಪರ್ಧೆಗೆ ಒದಗಿಸುವ ಚಿತ್ರವು ಗರಿಷ್ಠ 5 ನಿಮಿಷಕ್ಕೆ ಸೀಮಿತವಾಗಿ ರಬೇಕು. ಕಿರುಚಿತ್ರವನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡಲು ಅವ ಕಾಶವಿದ್ದು, ಮೊಬೈಲ್ ತಂತ್ರಜ್ಞಾನದ ಸಂಪೂರ್ಣ ಉಪಯೋಗ ಪಡೆಯ ಬಹುದು. ಪಿಯುಸಿ ಮತ್ತು ಪದವಿ ಕಾಲೇಜುಗಳಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯುವ ಸ್ಪರ್ಧೆಗೆ ಒಂದು ಕಾಲೇಜಿನಿಂದ ಎರಡು ಕಿರುಚಿತ್ರಗಳನ್ನು ನೀಡಲು ಅವಕಾಶ ಇದೆ. ಕಿರುಚಿತ್ರವು ಸೆ.15ರ ಒಳಗೆ ಸಂಘಟಕರಿಗೆ ತಲುಪಿಸಬೇಕು.

ಕಿರುಚಿತ್ರವನ್ನು ಇಮೇಲ್(udupinodrugs@gmail.com ) ಮೂಲಕ ಕಳುಸಬೇಕು ಮತ್ತು ಒಂದು ಸೆಟ್ ಡಿವಿಡಿ ಅಥವಾ ಸಿಡಿಯ ಮೂಲಕ ಸಂಚಾಲಕರು, ಉಡುಪಿ ಪ್ರೆಸ್ ಕ್ಲಬ್, ಪತ್ರಿಕಾ ಭವನ, ಕಾಂಗ್ರೆಸ್ ಭವನದ ಬಳಿ, ಬ್ರಹ್ಮಗಿರಿ ಉಡುಪಿ-576101 ಇಲ್ಲಿಗೆ ಪೋಸ್ಟ್, ಕೊರಿಯರ್ ಅಥವಾ ಮುಖತಃ ತಲುಪಿಸಬಹುದು.

ಇದರ ಜೊತೆಗೆ ಕಾಲೇಜಿನ ಪ್ರಾಂಶುಪಾಲರ ಧೃಡೀಕರಣ ಪತ್ರ, ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು 2 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಾಗರಾಜ್ ರಾವ್(9972544733), ಪ್ರಸನ್ನ ಕೊಡ ವೂರು(9449293214), ಸೂರಜ್(9844998133) ಇವರನ್ನು ಸಂಪರ್ಕಿ ಸುಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News