×
Ad

ದ.ಕ.ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಸ್‌ಡಿಪಿಐ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

Update: 2018-08-17 22:46 IST

ಮಂಗಳೂರು, ಆ.17: ದ.ಕ.ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಆ.31ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಿಸಿದ್ದಾರೆ.

ಬಂಟ್ವಾಳ ಪುರಸಭೆಯ ಕೈಕಂಬದಲ್ಲಿ ಬಶೀರ್ ಪಳ್ಳ, ಶಾಂತಿ ಅಂಗಡಿಯಲ್ಲಿ ಇಸಾಕ್ ಶಾಂತಿ ಅಂಗಡಿ, ಪರ್ಲಿಯದಲ್ಲಿ ಎಸ್.ಎಚ್. ಶಾಹುಲ್, ಮದ್ದದಲ್ಲಿ ಇಕ್ಬಾಲ್ ಮದ್ದ, ಬಂಟ್ವಾಳದಲ್ಲಿ ಮೂನಿಷ್ ಅಲಿ, ಗೂಡಿನ ಬಳಿ 13ರಲ್ಲಿ ಸಂಶಾದ್ ಇಸ್ಹಾಕ್, ಗೂಡಿನ ಬಳಿ 14ರಲ್ಲಿ ಝೀನತ್ ಫೈರೋಝ್, ಜೈನರಪೇಟೆಯಲ್ಲಿ ಇದ್ರೀಸ್, ಲೊರೆಟ್ಟೊಪದವಿನಲ್ಲಿ ರಿಯಾಝ್, ಪಾಣೆಮಂಗಳೂರಿನಲ್ಲಿ ಯೂಸುಫ್ ಆಲಡ್ಕ, ತಲಪಾಡಿಯಲ್ಲಿ ರಾಮಣ್ಣ ಶೆಟ್ಟಿ, ಗಾಂದೋಡಿಯಲ್ಲಿ ಲತೀಫ್ ಕೆ.ಎಚ್. ಸ್ಪರ್ಧಿಸಲಿದ್ದಾರೆ.

ಪುತ್ತೂರು ನಗರಸಭೆಯ ಬನ್ನೂರಿನಲ್ಲಿ ಫಾತಿಮಾ ಝುಹರಾ, ಚಿಕ್ಕ ಮಡ್ನೂರಿನಲ್ಲಿ ಲತೀಫ್ ಸಾಲ್ಮರ, ಕೆಮ್ಮಿಂಜೆಯಲ್ಲಿ ಯಹ್ಯಾ, ಸಾಲ್ಮರದಲ್ಲಿ ಉಸ್ಮಾನ್ ಸಾಲ್ಮರ ಸ್ಪರ್ಧಿಸಲಿದ್ದಾರೆ.

ಉಳ್ಳಾಲ ನಗರಸಭೆಯ ಕೋಟೆಪುರದಲ್ಲಿ ರುಖಿಯ ಇಕ್ಬಾಲ್, ಕೋಡಿ 2ರಲ್ಲಿ ಶಹನಾಝ್ ಅಕ್ರಮ್ ಹಸನ್, ಸೇನರಬೈಲ್ 1ರಲ್ಲಿ ಮುಶರ್ರಫ್, ಸೇನರಬೈಲ್ 2ರಲ್ಲಿ ರಮೀಝ್, ಕಕ್ಕೆತೋಟದಲ್ಲಿ ಅಸ್ಗರ್ ಅಲಿ, ಮೇಲಂಗಡಿಯಲ್ಲಿ ಕಮರುನ್ನೀಸಾ ನಿಝಾಮ್, ಹಳೆಕೋಟೆಯಲ್ಲಿ ಝರೀನ ರವೂಫ್, ಹಳೇಕಲದಲ್ಲಿ ಅಸ್ಗರ್ ಅಲಿ, ಮುಕ್ಕಚ್ಚೇರಿ 1ರಲ್ಲಿ ಜಮಾಲ್, ಮುಕ್ಕಚೇರಿ 2ರಲ್ಲಿ ಬದ್ರುದ್ದೀನ್ ಸ್ಪರ್ಧಿಸಲಿದ್ದಾರೆ.

ಬಂಟ್ವಾಳದ 12 ವಾರ್ಡ್ ಮತ್ತು ಪುತ್ತೂರಿನ 4 ವಾರ್ಡ್ ಹಾಗೂ ಉಳ್ಳಾಲದ 10 ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಕಣಕ್ಕಿಳಿಯಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾರ್ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News