ಪುತ್ತೂರು: ರಿಕ್ಷಾ ಚಾಲಕರಿಬ್ಬರ ನಡುವೆ ಹೊಡೆದಾಟ
Update: 2018-08-17 23:11 IST
ಪುತ್ತೂರು, ಆ. 17: ರಿಕ್ಷಾ ಕ್ಯೂ ವಿಚಾರದಲ್ಲಿ ಚಾಲಕರ ಮಧ್ಯೆ ಪರಸ್ಪರ ಹೊಡೆದಾಟ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ನಡೆದಿದೆ. ತಾಲೂಕಿನ ನರಿಮೊಗರು ಗ್ರಾಮದ ಮನಿಯಾ ಎಂಬಲ್ಲಿನ ನಿವಾಸಿ ರಘುನಾಥ (38) ಆಸ್ಪತ್ರೆಗೆ ದಾಖಲಾದ ರಿಕ್ಷಾ ಚಾಲಕ.
ಸವಣೂರಿನ ಪ್ರಸಾದ್ (26) ಎಂಬ ಚಾಲಕ ಹಲ್ಲೆ ನಡೆಸಿರುವ ಆರೋಪಿ. ರಿಕ್ಷಾ ಪಾರ್ಕಿಂಗ್‌ನಲ್ಲಿ ಕ್ಯೂ ನಿಲ್ಲುವ ವಿಚಾರದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿತ್ತು. ಗಾಯಾಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.