ನೆರೆ ಹಾವಳಿ: 539 ಮಂದಿ ಸ್ಥಳಾಂತರ
Update: 2018-08-17 23:14 IST
ಮಂಗಳೂರು, ಆ.17: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ನೆರೆ ಹಾವಳಿ ಮುಂದುವರಿದಿದೆ.
ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಪಾತ್ರದಲ್ಲಿ ನೆರೆ ಹಾವಳಿಯಿಂದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನೆರೆಯಿಂದ ಸಂತ್ರಸ್ತರಾದ 101 ಮನೆಗಳ 539 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಜಿಲ್ಲೆಯ ಆಲಡ್ಕ, ಕಡಬ, ಕೂಟೇಲು, ಅಜಿಲಮೊಗರು, ಕಡೇಶಿವಾಲಯ, ಉಪ್ಪಿನಂಗಡಿ , ಗುಂಡ್ಯ, ಶಿರಾಡಿ ಭಾಗದ ಪ್ರದೇಶಗಳು ಜಲಾವೃತಗೊಂಡಿವೆ.