ಅಕ್ರಮ ದೂರವಾಣಿ ಎಕ್ಸ್‌ಚೇಂಜ್ ಪ್ರಕರಣ: ಕಲಾನಿಧಿ ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2018-08-17 18:15 GMT

ಹೊಸದಿಲ್ಲಿ,ಆ.17: ಅಕ್ರಮ ದೂರವಾಣಿ ಎಕ್ಸ್‌ಚೇಂಜ್‌ಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉದ್ಯಮಿ ಕಲಾನಿಧಿ ಮಾರನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

ಇದರಿಂದಾಗಿ ಕಲಾನಿಧಿ ತನ್ನ ಸೋದರ ಹಾಗೂ ಮಾಜಿ ಕೇಂದ್ರ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಮತ್ತು ಇತರರೊಂದಿಗೆ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಬೇಕಾಗಿದೆ.

ಉಚ್ಚ ನ್ಯಾಯಾಲಯದ ಜು.25ರ ಆದೇಶವನ್ನು ಪ್ರಶ್ನಿಸಿ ದಯಾನಿಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜು.30ರಂದು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುವಂತೆ ಸೂಚಿಸಿತ್ತು.

ದಯಾನಿಧಿ ಸಚಿವರಾಗಿದ್ದಾಗ ತನ್ನ ಅಧಿಕಾರವನ್ನು ದುರುಪಯೋಗಿಸಿಕೊಂಡು ಚೆನ್ನೈನ ತನ್ನ ನಿವಾಸದಲ್ಲಿ ಖಾಸಗಿ ದೂರವಾಣಿ ಎಕ್ಸ್‌ಚೇಂಜ್‌ಗಳನ್ನು ಸ್ಥಾಪಿಸಿದ್ದರು ಮತ್ತು ಇದು ಸನ್ ನೆಟ್‌ವರ್ಕನ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿತ್ತು ಎಂದು ಸಿಬಿಐ ಆರೋಪಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News