ನಿಧನ: ಪ್ರೊ.ಕೆ.ಎನ್.ಕೆದ್ಲಾಯ
Update: 2018-08-18 20:02 IST
ಉಡುಪಿ, ಆ.18: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗ ದಲ್ಲಿ ಸಂಸ್ಥೆಯ ಆರಂಭದಿಂದ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪ್ರೊ.ಕೆ.ಎನ್.ಕೆದ್ಲಾಯ ಇವರು ತಮ್ಮ 76 ವಯಸ್ಸಿನಲ್ಲಿ ಶನಿವಾರ ದೊಡ್ಡಣಗುಡ್ಡೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಟೀಚರ್ಸ್ ಕೋ ಅಪರೇಟಿವ್ ಬ್ಯಾಂಕ್‌ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಪ್ರೊ.ಕೆದ್ಲಾಯ, ಅತ್ಯಂತ ಶಿಸ್ತುಬದ್ಧ ಅಧ್ಯಾಪಕರೆಂದು ಹೆಸರು ಪಡೆದಿದ್ದು ಅಪಾರ ಅಭಿಮಾನಿ ವಿದ್ಯಾರ್ಥಿ ಬಳಗವನ್ನು ಹೊಂದಿದ್ದರು.