ಸಾಲಿಹಾತ್ ವಿದ್ಯಾರ್ಥಿ ಪ್ರತಿನಿಧಿಗಳ ಸರಕಾರ ಉದ್ಘಾಟನೆ
ಉಡುಪಿ, ಆ.18: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಸರಕಾರದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಉಡುಪಿ ವಕೀಲ ಸುಹಾನ್ ಸಾಸ್ತಾನ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ಪರಿಕಲ್ಪನೆಯ ಸಂಪೂರ್ಣ ಜ್ಞಾನ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸ ಬೇಕು. ಆಗ ಮಾತ್ರ ಮುಂದೆ ಈ ದೇಶದ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮಾನ್ಯತೆ ಸಿಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಸೈಮ್ ಗ್ರೂಪ್‌ನ ಚೇರ್‌ಮೆನ್ ಜಿ.ಸಾದಿಕ್ ಮಾತ ನಾಡಿದರು. ವೇದಿಕೆಯಲ್ಲಿ ಹಿರಿಯ ಟ್ರಸ್ಟಿ ಮೌಲಾನಾ ಆದ್ಮ್ ಸಾಹೇಬ್, ಕಾಲೇಜಿನ ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ಉಪನ್ಯಾಸಕಿ ಸನಾ ಹೋಬಳಿಮಟ್ಟದ ಪಂದ್ಯಾವಳಿ ಹಾಗೂ ಪ್ರತಿಭಾ ಕಾರಂಜಿಯ ವಿಜೇತರ ಪಟ್ಟಿಯನ್ನು ವಾಚಿಸಿದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಲ್ವಾ ಪ್ರಾರ್ಥನೆಗೈದರು. ಸೌದಾ ಶೇಕ್ ಕಾರ್ಯಕ್ರಮ ನಿರೂಪಿಸಿ ದರು. ಆಯಿಶಾ ಬತೂಲ್ ವಂದಿಸಿದರು.