×
Ad

‘ಆಯುರ್ವೇದ, ಆಧುನಿಕ ವಿಜ್ಞಾನದ ಸಮಾಗಮದಿಂದ ಸಮಾಜಕ್ಕೆ ಲಾಭ’

Update: 2018-08-18 20:16 IST

ಉಡುಪಿ, ಆ.18: ಔಷಧಿಗಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಅದರ ಗುಣಗಳು ಉತ್ಕೃಷ್ಟವಾಗಿರಬೇಕು. ಭೌತಿಕವಾಗಿ, ರಾಸಾಯನಿಕವಾಗಿ ಅದು ಪೂರಕವೇ ಅನ್ನುವುದನ್ನು ಗುರುತಿಸಲು ಆಧುನಿಕ ತಂತ್ರಗಾರಿಕೆಗಳು ಆಧಾರವಾಗುತ್ತವೆ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಸಮಾಗಮ ಸಮಾಜಕ್ಕೆ ಲಾಭವಾಗುತ್ತದೆ ಎಂದು ಎಸ್‌ಡಿಎಂ ರಿಸರ್ಚ್ ಸೆಂಟರ್ ಫಾರ್ ಆಯುರ್ವೇದ ಎಂಡ್ ಅಲೈಡ್ ಸೈನ್ಸ್‌ನ ಹಿರಿಯ ವಿಜ್ಞಾನಿ ಡಾ.ಪ್ರೇಮಲತಾ ಶೆಟ್ಟಿ ಹೇಳಿದ್ದಾರೆ.

ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾ ಲಯದ ದ್ರವ್ಯಗುಣ ವಿಭಾಗದ ವತಿಯಿಂದ ಇತ್ತೀಚಿಗೆ ನಡೆದ ಕ್ವಾಲಿಟಿ ಕಂಟ್ರೋಲ್ ಟೆಕ್ನಿಕ್ಸ್ ಇನ್ ಹರ್ಬಲ್ ಡ್ರಗ್ ಇವಾಲ್ಯೂವೇಷನ್ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತ ನಾಡುತಿದ್ದರು.

ಸೆಂಟರ್‌ನ ವಿಜ್ಞಾನಿ ಹಾಗೂ ಸಂಶೋಧನಾಧಿಕಾರಿ ಸುಚಿತ್ರಾ ಎಸ್.ಪ್ರಭು ಮಾತನಾಡಿದರು. ಅಧ್ಯಕ್ಷತೆಯನ್ನು ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಡೀನ್ ಡಾ.ನಾಗರಾಜ್ ಎಸ್. ವಹಿಸಿದ್ದರು.

ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ. ವರದಿ ವಾಚಿಸಿದರು. ಆಯುಷ್ ಇಲಾಖೆಯ ಚೆನೈನ ಪ್ರಾಂತೀಯ ಸಂಶೋಧನಾಧಿಕಾರಿ ಡಾ. ಸುನಿಲ್‌ಕುಮಾರ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಡಾ.ಸುಮಾ ಮಲ್ಯ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಡಾ.ಮುಹಮ್ಮದ್ ೈಸಲ್ ವಂದಿಸಿದರು. ಡಾ.ಶಿಫಾ ಶೆಟ್ಟಿ ಮತ್ತು ಡಾ.ಸುಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News