ಆ.20: ಕೊಡಗು ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಂಗ್ರಹ

Update: 2018-08-18 14:47 GMT

ಉಡುಪಿ, ಆ.18: ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿ, ಉಡುಪಿ ಜಿಲ್ಲೆ ಇದರ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಭೀಕರ ನೆರೆಯಿಂದ ಸಂತ್ರಸ್ಥರಾದವರಿಗೆ ನೆರವು ನೀಡುವ ಉದ್ದೇಶದಿಂದ ಆ.20ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಡುಪಿಯ ಆಸುಪಾಸಿನ ಪ್ರದೇಶ ಗಳಲ್ಲಿ ದಾನಿಗಳಿಂದ ಅಗತ್ಯವಸ್ತುಗಳನ್ನು ಸಂಗ್ರಹಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

ಬ್ರೆಡ್, ಹಾಲಿನ ಪುಡಿ, ಬಿಸ್ಕಿಟ್, ನೀರಿನ ಬಾಟ್ಲಿ, ಚಾದರ್, ಬಟ್ಟೆಗಳು ( ಉಪಯೋಗಿಸದ ಹೊಸ ವಸ್ತುಗಳು ಮಾತ್ರ) ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಜು.21ರಂದು ಕೊಡಗು ಜಿಲ್ಲಾಡಳಿತದೊಂದಿಗೆ ಸೇರಿ ಸಂತ್ರಸ್ಥರಿಗೆ ನೇರವಾಗಿ ವಿತರಿಸಲಾಗುವುದು.

ಈ ಕಾರ್ಯಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬೆಳಗ್ಗೆ 9ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಲಿರುವರು. ಹೆಚ್ಚಿನ ಮಾಹಿತಿಗಾಗಿ ಎಂ.ಜಿ.ನಾಗೇಂದ್ರ:9480792668, ಅನ್ಸಾರ್ ಅಹಮ್ಮದ್: 9743285855, ರಾಘವೇಂದ್ರ ಶೆಟ್ಟಿ: 9164110047 ಅವರನ್ನು ಸಂಪರ್ಕಿಸು ವಂತೆ ಸಮಿತಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News