ಆಳ್ವಾಸ್‌ನಲ್ಲಿ ‘ಮೈಕ್ರೋಸ್ಪಾರ್ಕ್’ ಕಾರ್ಯಾಗಾರ

Update: 2018-08-18 14:59 GMT

ಮೂಡುಬಿದಿರೆ, ಆ.18: ಯಾವುದೇ ಅನ್ವೇಷಣೆಯನ್ನು ಮಾಡಬೇಕಾದರೆ ಅವಲೋಕನೆ ಎಂಬುದು ಮುಖ್ಯವಾಗಿರುತ್ತದೆ. ಸಂಶೋಧನೆಯಲ್ಲಿ ಇದಕ್ಕೆ ತುಂಬಾ ಮಹತ್ವವಿದೆ. ಆದ್ದರಿಂದ ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಗಮನಿಸಬೇಕಾದದ್ದು ತುಂಬಾ ಮುಖ್ಯ ಎಂದು ಆಳ್ವಾಸ್ ಕಾಲೇಜಿನ ಬಯೋಟೆಕ್ನಾಲಜಿ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರರಾವ್. ಬಿ ಹೇಳಿದರು.

ಆಳ್ವಾಸ್ ಕಾಲೇಜಿನ ಮೈಕ್ರೋ ಬಯಾಲಜಿ ವಿಭಾಗದಿಂದ ವಿವಿಧ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಮೈಕ್ರೋಸ್ಪಾರ್ಕ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇವತ್ತಿನ ಈ ಆಧುನಿಕ ತಂತ್ರಜ್ಞಾನಕ್ಕೆ ಮೂಲ ಕಾರಣ ಮೈಕ್ರೋ ಬಯಾಲಜಿ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೈಕ್ರೋ ಬಯಾಲಜಿ ಕಲಿಕೆಯತ್ತ ಆಸಕ್ತಿ ವಹಿಸುತ್ತಿಲ್ಲ. ಇಂದಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಮೂಲ ವಿಜ್ಞಾನದ ಇತರೆ ಕ್ಚೇತ್ರಗಳಿಗೂ ಸಾಕಷ್ಟು ಮಹತ್ವ ಹಾಗೂ ಪ್ರೋತ್ಸಾಹವಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು. ಮೈಕ್ರೋ ಬಯಾಲಜಿ ಕ್ಷೇತ್ರವೂ ಕೂಡ ಸಾಕಷ್ಟು ವ್ಯಾಪ್ತಿ ಹೊಂದಿದ್ದು, ಇದರಲ್ಲಿ ತೊಡಗಿಸಿಕೊಂಡಲ್ಲಿ ವಿಜ್ಞಾನಿಯಾಗಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.

 ಹಿಂದಿ ವಿಭಾಗದ ಪ್ರಾಧ್ಯಾಪಕ ಡಾ. ರಾಜೀವ್ ಮಾತನಾಡಿ ಮಕ್ಕಳ ಮನಸ್ಸಿನಲ್ಲಿ ಹೊಸ ವಿಚಾರಗಳನ್ನು ಸೃಷ್ಠಿ ಮಾಡಬೇಕು. ಆ ಕೆಲಸ ಇಂದು ಆರಂಭವಾಗಿದೆ. ಈ ಅರ್ಥಪೂರ್ಣ ಕಾರ್ಯಗಾರದಿಂದ ಒಂದು ವಿಶೇಷ ಜ್ಞಾನದ ಬೆಳಕಿನ ಕಿಡಿಯನ್ನು ವಿದ್ಯಾರ್ಥಿಗಳಲ್ಲಿ ಹತ್ತಿಸಿದಂತಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಮೈಕ್ರೋ ಬಯಾಲಜಿ ವಿಭಾಗದಿಂದ ಆಯೋಜಿಸಿದ್ದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿಗೆದ್ದ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹುಮಾನ ವಿತರಿಸಲಾಯಿತು. ರೋಗಗಳ ಮೂಲ, ಮೈಕ್ರೋ ಬಯಾಲಜಿ ಪ್ರಪಂಚ, ನಿಫಾ ವೈರಸ್ ಮುಂತಾದ ವಿಷಯಗಳ ಇಪ್ಪತ್ತಕ್ಕೂ ಹೆಚ್ಚು ಪೋಸ್ಟರ್ ರಚಿಸಿ ಪ್ರದರ್ಶನಕ್ಕೆಇಡಲಾಗಿತ್ತು.

ಕಾರ್ಯಗಾರದಲ್ಲಿ ಆಳ್ವಾಸ್ ಕಾಲೇಜು, ಮಹಾವೀರ ಕಾಲೇಜು, ಮಿಜಾರು ಸರ್ಕಾರಿಕಾಲೇಜು, ನಿಟ್ಟೆಕಾಲೇಜು ಮತ್ತುಜೈನಕಾಲೇಜಿನ ಪಿಯುಸಿ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ರಮ್ಯ.ರೈ ಎಮ್, ಮೈಕ್ರೋ ಬಯಾಲಜಿ ಮುಖ್ಯಸ್ಥೆ ರಮ್ಯರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News