ಪಡುಬಿದ್ರೆಯಲ್ಲಿ ನೆರೆ ಸಂತ್ರಸ್ಥರಿಗೆ ಸಹಾಯ: ಅಗತ್ಯ ವಸ್ತುಗಳ ಸಂಗ್ರಹಣೆಗೆ ಚಾಲನೆ
Update: 2018-08-18 20:31 IST
ಪಡುಬಿದ್ರೆ, ಆ. 18: ರಾಜ್ಯದ ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಸಂತ್ರಸ್ಥರಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಎನ್‌ಎಸ್‌ಸಿಡಿಎಫ್ ಮತ್ತು ಕೆಎಸ್‌ಎಸ್‌ಎಪಿ ಸಂಘಟನೆಗಳು ದಿನಬಳಕೆ ಪದಾರ್ಥಗಳ ಸಂಗ್ರಹಣಾ ಅಭಿಯಾನ ಕಾರ್ಯಕ್ಕೆ ಆ.19ರಂದು ಚಾಲನೆ ನೀಡಲಿದೆ.
ಮಧ್ಯಾಹ್ನ 2ಗಂಟೆಗೆ ಪಡುಬಿದ್ರಿಯ ಸುಜ್ಲಾನ್ ಕಾಲನಿಯ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಲಿದ್ದಾರೆ.
ಸಾರ್ವಜನಿಕರು ದಿನ ಬಳಕೆ ವಸ್ತುಗಳನ್ನು ಸುಜ್ಲಾನ್ ಕಾಲನಿಯ ಸಭಾಭವನಕ್ಕೆ ತಲುಪಿಸಬೇಕೆಂದು ಎನ್‌ಎಸ್‌ಸಿಡಿಎಫ್ ಅಧ್ಯಕ್ಷ ಗಂಗಾಧರ ಗಾಂಧಿ ಹಾಗೂ ಕೆಎಸ್‌ಎಸ್‌ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.