ಆದರ್ಶ ನಾಯಕ ಅಟಲ್‌ಜೀ: ಕ್ಯಾ. ಕಾರ್ಣಿಕ್

Update: 2018-08-18 15:14 GMT

ಮಂಗಳೂರು, ಆ. 18: ವಾಜಪೇಯಿ ಓರ್ವ ಅಪ್ರತಿಮ ನಾಯಕ, ಸಮರ್ಥ ಸಂಘಟಕ, ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮುನ್ನೆಡೆಸುವವ ಹೇಗಿರಬೇಕೆಂಬುದಕ್ಕೆ ಒಂದು ಮಾದರಿ.  ವಾಗ್ಮಿ, ಮಗುವಿನ ಕವಿ ಹೃದಯದ ನಿಷ್ಠುರವಾದಿ” ಎಂಬುದಾಗಿ ವಿಧಾನಪರಿಷತ್ ಮಾಜೀ ಸದಸ್ಯ ಬಿ.ಜೆ.ಪಿ. ನೇತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಅಟಲ್‌ಜೀ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಅಟಲ್‌ಜೀಯವರನ್ನು ಭೇಟಿ ಮಾಡಿದ ತನ್ನ ಜೀವನದ ಅಪೂರ್ವ ಕ್ಷಣಗಳನ್ನು ಅವರು ಭಾವಪೂರ್ವಕವಾಗಿ ಸ್ಮರಿಸಿಕೊಂಡರು.

ಕ್ಯಾಂಪ್ಕೊ ನಿರ್ದೇಶಕ ಶ್ರೀ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿದರು. ಅಧ್ಯಕ್ಷತೆವಹಿಸಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸಮಸ್ತ ಕ್ಯಾಂಪ್ಕೊ ಬಳಗದ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಾ, ವಾಜಪೇಯಿಯವರು ಅರ್ಪಣಾ ಮನೋಭಾವದಿಂದ ದೇಶಕಟ್ಟುವ ಕಾರ್ಯಮಾಡಿದ್ದಾರೆ ಎಂದರು.

ಕ್ಯಾಂಪ್ಕೊ ನೌಕರ ವೃಂದದಿಂದ ರೇಶ್ಮಾ ಮಲ್ಯ, ಉದಯ ಕುಮಾರ್ ರೈ, ಟಿ.ಎಸ್.ಭಟ್, ಪ್ರಸಾದ್ ಕೆ.ಎಸ್., ಶಿವರಾಮ ಪಿ., ಹಾಗೂ ಕಿಶನ್ ಪಿ. ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮೌನ ಪ್ರಾರ್ಥನೆ ಹಾಗೂ ಶಾಂತಿಮಂತ್ರವನ್ನು ಪಠಿಸಲಾಯಿತು. ಕ್ಯಾಂಪ್ಕೊದ ವಿವಿಧ ಶಾಖೆಗಳಲ್ಲಿ ಆಗಲಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News