ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಒಟ್ಟು 21 ಸಾಕ್ಷಿಗಳ ವಿಚಾರಣೆ
Update: 2018-08-18 22:29 IST
ಉಡುಪಿ, ಆ.18: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಯಿತು.
ಪ್ರಕರಣದ ಆರೋಪಿ ನಿರಂಜನ್ ಭಟ್ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ವಜ್ರದ ಉಂಗುರ ನುಂಗಿದ್ದ ವೇಳೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಭಾಸ್ಕರ್ ಶೆಟ್ಟಿಯ ಮೂಳೆಗಳ ಪಂಚ ಮಹಜರು ನಡೆಸಿದವರ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ ಹಾಗೂ ಪಾಟಿ ಸವಾಲು ಅನ್ನು ಆರೋಪಿ ಪರ ವಕೀಲರು ನಡೆಸಿದರು.
ಈವರೆಗೆ ಈ ಪ್ರಕರಣದಲ್ಲಿ ಒಟ್ಟು 21 ಸಾಕ್ಷಿಗಳ ವಿಚಾರಣೆ ನಡೆಸಲಾ ಯಿತು. ಮುಂದಿನ ವಿಚಾರಣೆಯನ್ನು ಸೆ.4,5 ಮತ್ತು ಸೆ.20, 28ಕ್ಕೆ ನಿಗದಿ ಪಡಿಸಿ ನ್ಯಾಯಾಧೀಶರು ಆದೇಶ ನೀಡಿದರು.