ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 301 ಮಂದಿಯಿಂದ 384 ನಾಮಪತ್ರ

Update: 2018-08-18 17:04 GMT

ಉಡುಪಿ, ಆ.18: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ನಡೆಯುವ ಚುನಾವಣೆಯಲ್ಲಿ ಇರುವ ಒಟ್ಟು 97 ಸ್ಥಾನಗಳಿಗೆ 301 ಮಂದಿ ಒಟ್ಟು 384 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಒಟ್ಟು 267 ನಾಮಪತ್ರಗಳು ಸಲ್ಲಿಕೆಯಾದವು. ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ.23 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿರುತ್ತದೆ.

ಉಡುಪಿ ನಗರಸಭೆಯ 35 ಸ್ಥಾನಗಳಿಗೆ ಒಟ್ಟು 98 ಮಂದಿ 131 ನಾಮಪತ್ರ ಸಲ್ಲಿಸಿದ್ದಾರೆ. ಇವುಗಳಲ್ಲಿ ಕಾಂಗ್ರೆಸ್ ಪರವಾಗಿ 38, ಬಿಜೆಪಿ ಪರವಾಗಿ 66, ಜೆಡಿಎಸ್ 11, ಬಿಎಸ್ಪಿ 1, ಶಿವಸೇನೆ1 ಹಾಗೂ ಪಕ್ಷೇತರರು 14 ನಾಮಪತ್ರ ಗಳನ್ನು ಸಲ್ಲಿಸಿದ್ದಾರೆ.

ಕುಂದಾಪುರ ಪುರಸಭೆಯಲ್ಲಿರುವ 23 ಸ್ಥಾನಗಳಿಗೆ 81 ಮಂದಿ 113 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 30, ಬಿಜೆಪಿಯಿಂದ 51, ಜೆಡಿಎಸ್‌ನಿಂದ 5, ಸಿಪಿಎಂನಿಂದ 7, ಬಿಎಸ್ಪಿಯಿಂದ 4 ಹಾಗೂ ಪಕ್ಷೇತರರಿಂದ 16 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾರ್ಕಳ ಪುರಸಭೆಯ 23 ಸ್ಥಾನಗಳಿಗೆ 59 ಮಂದಿ 64 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇವುಗಳಲ್ಲಿ ಕಾಂಗ್ರೆಸ್‌ನ 26, ಬಿಜೆಪಿಯ 26, ಜೆಡಿಎಸ್‌ನ 3 ಹಾಗೂ ಪಕ್ಷೇತರರು 9 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ 16 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಒಟ್ಟು 63 ಮಂದಿ 76 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 39, ಬಿಜೆಪಿಯಿಂದ 22, ಜೆಡಿಎಸ್‌ನಿಂದ 6, ಸಿಪಿಐ 1 ಹಾಗೂ ಪಕ್ಷೇತರರು 8 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿರುವ 97 ವಾರ್ಡುಗಳಿಗೆ (ಸ್ಥಾನ) 301ಮಂದಿ 384 ನಾಮಪತ್ರಗಳನ್ನು ಸಲ್ಲಿಸಿದ್ದು, ಇವರಲ್ಲಿ ಕಾಂಗ್ರೆಸ್‌ನ 133, ಬಿಜೆಪಿಯಿಂದ 165,ಜೆಡಿಎಸ್‌ನಿಂದ 25, ಸಿಪಿಐ 1, ಸಿಪಿಎಂ 7, ಬಿಎಸ್ಪಿ 5, ಶಿವಸೇನೆ 1 ಹಾಗೂ ಪಕ್ಷೇತರರು 47 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News