ಮಂಗಳೂರು ಸೆಂಟ್ರಲ್‌ನಿಂದ ನಿರ್ಗಮಿಸುವ ಎಲ್ಲ ರೈಲುಗಳ ಸಂಚಾರ ರದ್ದು

Update: 2018-08-18 17:30 GMT

ಮಂಗಳೂರು, ಆ.18: ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆ, ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಮಂಗಳೂರು ಸೆಂಟ್ರಲ್‌ನಿಂದ ನಿರ್ಗಮಿಸುವ ಎಲ್ಲ ರೈಲುಗಳ ಸಂಚಾರವನ್ನು ಆ.18ರಂದು ರದ್ದುಗೊಳಿಸಲಾಗಿದೆ.

ಮಂಗಳೂರು ಸೆಂಟ್ರಲ್- ಚೆನ್ನೈ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ಟ್ರೇನ್ (16603), ಮಂಗಳೂರು ಸೆಂಟ್ರಲ್- ತಿರುವನಂತಪುರಂ ಮಲಬಾರ್ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್- ಕಚೆಗುಡ ಎಕ್ಸ್‌ಪ್ರೆಸ್ (ಎರಡು ವಾರಕ್ಕೊಮ್ಮೆ)(17605), ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16518) ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಸಂತ್ರಗಚಿ- ಮಂಗಳೂರು ಸೆಂಟ್ರಲ್ ವಿವೇಕ್ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಟ್ರೇನ್ (22851) ಆ.16ರಂದು ಪ.ಬಂಗಾಳದ ಸಂತ್ರಗಚಿಯಿಂದ ಹೊರಟು ಆ.18ರಂದು ಮಂಗಳೂರು ಸೆಂಟ್ರಲ್‌ಗೆ ಆಗಮಿಸಬೇಕಿದ್ದ ರೈಲು ಎರೊಡೆ (ತ.ನಾಡು)- ಮಂಗಳೂರು ಮಧ್ಯೆ ರದ್ದಾಗಿದೆ.

ಆ.18ರಂದು ರಾತ್ರಿ 8:15ಕ್ಕೆ ಹೊರಡಲಿದ್ದ ಕೊಚಿವೆಲಿ-ಚಂಡೀಗಡ್ ಸಂಪರ್ಕ್ ಕ್ರಾಂತಿ(ಎರಡು ವಾರಕ್ಕೊಮ್ಮೆ) ಎಕ್ಸ್‌ಪ್ರೆಸ್ ಟ್ರೇನ್ (12217) ಕೊಚಿವೆಲಿ ಮತ್ತು ಮಂಗಳೂರು ಜಂ. ಮಧ್ಯೆ ಭಾಗಶಃ ರದ್ದಾಗುವ ಸಾಧ್ಯತೆ ಇದೆ.

ತಿರುವನಂತಪುರಂ- ಮುಂಬೈ ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್ ಟ್ರೇನ್ (16346) ಮಂಗಳೂರು ಜಂ.ನಿಂದ ಆ.18ರಂದು ರಾತ್ರಿ 11:20ಕ್ಕೆ ಪ್ರಯಾಣ ಬೆಳೆಸಲಿದೆ.

ಆ.19ರಂದು ಎರೊಡೆಯಿಂದ ನಿರ್ಗಮಿಸಬೇಕಿದ್ದ ಮಂಗಳೂರು ಸೆಂಟ್ರಲ್-ಸಂತ್ರಗಚಿ ವಿವೇಕ್ ಎಕ್ಸ್‌ಪ್ರೆಸ್(ವಾರಕ್ಕೊಮ್ಮೆ) ಟ್ರೇನ್ (22852) ಮಂಗಳೂರು ಸೆಂಟ್ರಲ್ ಮತ್ತು ಎರೊಡೆ ನಡುವೆ ಭಾಗಶಃ ರದ್ದಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News