ನೆರೆ ಸಂತ್ರಸ್ತರಿಗೆ ನೆರವು ಸ್ವೀಕಾರ ಕೇಂದ್ರಗಳು

Update: 2018-08-18 17:36 GMT

ಮಂಗಳೂರು, ಆ. 18: ದ.ಕ., ಉಡುಪಿ, ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಭಾರೀ ಮಳೆಯಿಂದಾಗಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ತುರ್ತು ಅವಶ್ಯಕ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇಮಿಸಿದ್ದಾರೆ.

ನಗರದ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅವಶ್ಯಕ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮನಪಾ ಜಂಟಿ ಆಯುಕ್ತ ಗೋಕುಲ್‌ಕುಮಾರ್ ದಾಸ್ ನಾಯಕ್ (9448951722), ಕಾರ್ಖಾನೆಗಳ ಉಪನಿರ್ದೇಶಕ ಎಚ್.ಎಸ್.ನರೇಂದ್ರಬಾಬು (9663374033), ಪ್ರೊಬೇಷನರಿ ಎಸಿ ಸಂತೋಷಕುಮಾರ್ (9483570317) ನೇತೃತ್ವ ವಹಿಸಿದ್ದಾರೆ.

ಮೊದಲ ತಂಡದಲ್ಲಿ ಮನಪಾ ಲೆಕ್ಕಾಧಿಕಾರಿ ಮನೋಹರ (9880916038), ಮನಪಾ ಆಹಾರ ನಿರೀಕ್ಷಕರಾದ ಅರುಣಕುಮಾರ್ (9986239632), ಕಿರಣ್ (9611849367), ಕೆ.ಪಿ.ಟಿ. ಉಪನ್ಯಾಸಕ ದೇವರಾಜ್ (9741127644), ಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವೀರಣ್ಣ (9945812430) ಇದ್ದು, ಬೆಳಗ್ಗೆ 9ರಿಂದ 1:30ರವರೆಗೆ ಕಾರ್ಯನಿರ್ವಹಿಸಲಿದೆ.

ಎರಡನೆ ತಂಡದಲ್ಲಿ ಮನಪಾ ಲೆಕ್ಕಾಧಿಕಾರಿ ಗುರುರಾಜ ಪಟಾಡಿ (8970787887), ಆರೋಗ್ಯ ನಿರೀಕ್ಷಕರಾದ ಸಂಜಯ್ (8722119111), ರಕ್ಷಿತ್ (9180772242), ಕೆ.ಪಿ.ಟಿ. ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ನರಸಿಂಹ ಭಟ್ (9448835521), ಗ್ರಾಮ ಲೆಕ್ಕಾಧಿಕಾರಿ ಧರ್ಮ ಸಾಮ್ರಾಜ್ಯ (7619345563) ಮಧ್ಯಾಹ್ನ 1:30ರಿಂದ ಸಂಜೆ 6:30ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಸ್ವೀಕಾರ ಕೇಂದ್ರದಲ್ಲಿ ಸಾರ್ವಜನಿಕರು/ ಸಂಘ-ಸಂಸ್ಥೆಗಳು ನೀಡುವ ಆವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನದ 24 ಗಂಟೆ ತೆರೆದಿರುವ ಉಚಿತ ಸಹಾಯವಾಣಿ ಕೇಂದ್ರ(1077)ವನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸ್ವೀಕರಿಸಬಹುದಾದ ವಸ್ತುಗಳು:

ಹಾಸಿಗೆ ಹೊದಿಕೆಗಳು (ಹೊಸ ಬ್ಲಾಂಕೆಟ್ಸ್), ಜಮಖಾನ/ಕಾರ್ಪೆಟ್ಸ್, ಅಡುಗೆ ಸಾಮಗ್ರಿಗಳು (ಪಾತ್ರೆಗಳು, ಅಕ್ಕಿ, ಚಹಾ ಹುಡಿ, ಎಣ್ಣೆ ಪ್ಯಾಕೆಟ್, ಉಪ್ಪು, ಬೇಳೆ ಇತರ ತರ ಪದಾರ್ಥ), ಬಿಸ್ಕತ್/ಬ್ರೆಡ್, ಮೆಡಿಶನ್ಸ್, ನೀರಿನ ಬಾಟಲ್, ಉಡುಪುಗಳು, ಟವೆಲ್ಸ್, ಸೋಪ, ಬ್ರಷ್, ಟೂತ್‌ಪೇಸ್ಟ್, ಟಾರ್ಚ್, ವಿದ್ಯಾರ್ಥಿಗಳಿಗಾಗಿ ನೋಟ್ ಪುಸ್ತಕಗಳು, ಸ್ಯಾನಿಟರಿಸ್ ಸಾಮಗ್ರಿಗಳನ್ನು ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News