ಏಶ್ಯನ್ ಗೇಮ್ಸ್: ಮಿಶ್ರ ಶೂಟಿಂಗ್ ನಲ್ಲಿ ಭಾರತಕ್ಕೆ ಮೊದಲ ಕಂಚು

Update: 2018-08-19 07:35 GMT

ಜಕಾರ್ತ, ಆ.19: ಜಕಾರ್ತದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನ ಮಿಶ್ರ ಶೂಟಿಂಗ್ ವಿಭಾಗದಲ್ಲಿ  ಭಾರತ ಕಂಚು ಜಯಿಸಿದೆ.

ಅಪೂರ್ವಿ ಚಾಂಡೇಲ ಮತ್ತು ರವಿಕುಮಾರ್  10 ಮೀಟರ್ ಏರ್ ರೈಫಲ್ ನಲ್ಲಿ  429.9 ಪಾಯಿಂಟ್ಸ್ ದಾಖಲಿಸಿ ಭಾರತದ  ಖಾತೆಗೆ ಮೊದಲ ಪದಕ ಜಮೆ ಮಾಡಿದ್ದಾರೆ. 

ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಮತ್ತು ಮನು ಭಾಕೆರ್ ಅರ್ಹತಾ ಸುತ್ತಿನಲ್ಲೇ  ವಿಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News