ಬಿಸಿಎಫ್‌ನಿಂದ ಶೈಕ್ಷಣಿಕ ಸೆಮಿನಾರ್-ಕಲಾ ಪ್ರದರ್ಶನ

Update: 2018-08-19 08:20 GMT

ಮಂಗಳೂರು, ಆ.19: ದುಬೈಯ ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವತಿಯಿಂದ ನಗರದ ಪುರಭವನದಲ್ಲಿ ಶೈಕ್ಷಣಿಕ ಸೆಮಿನಾರ್ ಹಾಗೂ ಕಲಾ ಪ್ರದರ್ಶನ ಕಾರ್ಯಕ್ರಮ ರವಿವಾರ ಬೆಳಗ್ಗೆ ಜರುಗಿತು.

ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ಸಭಾಧ್ಯಕ್ಷತೆ ವಹಿಸಿದ್ದರು.

ವೃತ್ತಿ ಮಾರ್ಗದರ್ಶನ, ವಿಚಾರ ಸಂಕಿರಣ, ಸೆಮಿನಾರ್ ಕಾರ್ಯಕ್ರಮವನ್ನು ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ನಡೆಸಿಕೊಟ್ಟರು.

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ನೀಡಿದರು.

ಈ ಸಂದರ್ಭ ಖುರ್ಷಿದ್ ಯಾಕೂಬ್ ಮತ್ತು ಅಹ್ಮದ್ ಮಿಕ್ದಾದ್ ಅವರ ಕಲಾ ಪ್ರದರ್ಶನ ಸಂಯೋಜಿಸಿದರು.

ವೇದಿಕೆಯಲ್ಲಿ ಡಿಸಿಪಿ ಹನುಮಂತರಾಯ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಆಝಾದ್ ಸಮೂಹ ಸಂಸ್ಥೆಯ ನಿರ್ದೇಶಕ ಮನ್ಸೂರ್ ಅಹ್ಮದ್, ಮಿಸ್ಬಾ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲೆ ಝಾಹಿದ್ ಜಲೀಲ್, ಝಹುರಾ ಅಬ್ಬಾಸ್, ಬಿಸಿಎಫ್ ಪೋಷಕ ಬಿ.ಎಂ.ಮುಮ್ತಾಝ್ ಅಲಿ, ಬಿಸಿಎಫ್ ವಿದ್ಯಾರ್ಥಿ ವೇತನ ವಿತರಣಾ ಸಮಿತಿಯ ಅಧ್ಯಕ್ಷ ಎಂ.ಇ. ಮೂಳೂರು, ಉದ್ಯಮಿ ಕೆ.ಮುಹಮ್ಮದ್ ಹಾರಿಸ್, ಅಬ್ದುಲ್ ಮಜೀದ್ ಸೂರಲ್ಪಾಡಿ, ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ಅಝೀಝ್ ಬೈಕಂಪಾಡಿ ಮತ್ತಿತರರು ಪಾಲ್ಗೊಂಡಿದ್ದರು.

ಬಿ.ಎ. ನಝೀರ್ ಸ್ವಾಗತಿಸಿದರು. ಅಮೀರುದ್ದೀನ್ ಎಸ್.ಇ. ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News