×
Ad

‘ನನ್ನ ಹಾಡು ನನ್ನದು ಸೀಸನ್-2’: ದೀಪಿಕಾ ಬಲ್ಲಾಳ್ ಚಿಟ್ಪಾಡಿ ಪ್ರಥಮ

Update: 2018-08-19 20:35 IST

ಉಡುಪಿ, ಆ.19: ಪರ್ಯಾಯ ಪಲಿಮಾರು ಮಠ, ಕಟಪಾಡಿ ದಿಶಾ ಕಮ್ಯೂನಿಕಷನ್ಸ್ ಟ್ರಸ್ಟ್, ಕಲಾನಿಧಿ ಸಾಂಸ್ಕೃತಿಕ ಕಲಾಪ್ರಕಾರಗಳ ಸಂಸ್ಥೆ, ರಾಗ ವಾಹಿನಿ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏರ್ಪಡಿಸಲಾದ ‘ನನ್ನ ಹಾಡು ನನ್ನದು ಸೀಸನ್-2’ ಸುಗಮ ಸಂಗೀತ ಗೀತಗಾಯನ ಫೈನಲ್ ಸ್ಪರ್ಧೆಯಲ್ಲಿ ದೀಪಿಕಾ ಬಲ್ಲಾಳ್ ಚಿಟ್ಪಾಡಿ ಪ್ರಥಮ ಹಾಗೂ ಡಿ.ಎಸ್.ಸೀತಾಪ್ರಜ್ಞಾ ಶೃಂಗೇರಿ ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ಪರ್ಧಾ ವಿಜೇತರಿಗೆ ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಾಯೋಜಿತ ಪ್ರಥಮ 10ಸಾವಿರ ಮತ್ತು ದ್ವಿತೀಯ 5 ಸಾವಿರ ನಗದು ಬಹುಮಾನ ಸಹಿತ ಟ್ರೋಫಿಯನ್ನು ವಿತರಿಸಿದರು.

ಉಡುಪಿ ನಾದವೈಭವಂ ವಾಸುದೇವ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ರಂಜನ್ ಕಲ್ಕೂರ, ಮಲ್ಪೆಲಯನ್ಸ್ ಕ್ಲಬ್ ಅಧ್ಯಕ್ಷೆ ವಿಜಯ ಗೋಪಾಲ ಬಂಗೇರ, ಮೀನಾ ದೇವೇಂದ್ರ ಮೆಂಡನ್, ನಾರಾಯಣಗುರು ಅರ್ಬನ್ ಕೋಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರೀಶ್ಚಂದ್ರ ಅಮೀನ್, ಬಡಗುಬೆಟ್ಟು ಸೊಸೈಟಿಯ ಶಾಖಾ ವ್ಯವಸ್ಥಾಪಕ ಪ್ರವೀಣ್, ರೋಟರಿ ಜಿಲ್ಲಾ ಮಾಜಿ ಗವರ್ನರ್ ಬಿ.ಪುಂಡಲೀಕ ಮರಾಠೆ, ಮಲಬಾರ್ ಗೋಲ್ಡ್‌ನ ಹಫೀಜ್ ರೆಹಮಾನ್, ಕೊಡವೂರು ದೇವಸ್ಥಾನದ ಮಾಜಿ ಮೊಕ್ತೇಸರ ಟಿ. ರಾಘವೇಂದ್ರ ರಾವ್ ನಾಯಕ್, ತೀರ್ಪುಗಾರರಾದ ಎನ್.ಎಚ್.ನಟರಾಜ್, ಗಣೇಶ್ ಗಂಗೊಳ್ಳಿ, ಭಾರತಿ ಟಿ.ಕೆ, ರಾಗವಾಹಿನಿ ಉಡುಪಿ ಅಧ್ಯಕ್ಷ ೋಹಿತ್ ಕುಮಾರ್ ಉಪಸ್ಥಿತರಿದ್ದರು.

ಕಟಪಾಡಿ ದಿಶಾ ಕಮ್ಯೂನಿಕಷನ್ಸ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಕಲಾನಿಧಿ ಸಾಂಸ್ಕೃತಿಕ ಕಲಾಪ್ರಕಾರಗಳ ಸಂಸ್ಥೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಉಪ್ಪೂರು ವಂದಿಸಿದರು. ಉಪನ್ಯಾಸಕ ದಯಾನಂದ್ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧೆಗೆ ಚಾಲನೆ: ಸ್ಪರ್ಧೆಯನ್ನು ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ನಾದವೈಭವಂ ವಾಸುದೇವ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಬಡಗುಬೆಟ್ಟು ಸೊಸೈಟಿಯ ಶಾಖಾ ವ್ಯವಸ್ಥಾಪಕ ರಾಜೇಶ್, ಕಲಾಪೋಷಕ ವಿಶ್ವನಾಥ್ ಶೆಣೈ, ಪುಂಡಲೀಕ ಮರಾಠೆ, ಕನ್ನಡ ಮತುತಿ ಸಂಸ್ಕೃತಿ ಇಲಾಖೆಯ ಪೂರ್ಣಿಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಭಾಗ್ಯಲಕ್ಷ್ಮೀ ಉಪ್ಪೂರು ವಂದಿಸಿದರು. ಉಪನ್ಯಾಸಕ ದಾನಂದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News