ಉಡುಪಿ: ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ
Update: 2018-08-19 20:38 IST
ಉಡುಪಿ, ಆ.19: ಉಡುಪಿ ಹೆಜ್ಜೆ ಗೆಜ್ಜೆ ಪ್ರತಿಷ್ಠಾನವು ರಜತ ಮಹೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ(ಜೂನಿಯರ್ ವಿಭಾಗ)ಯನ್ನು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ದರು. ಪ್ರಥಮ ಸ್ಥಾನ ವಿಜೇತರನ್ನು ಚಿನ್ನದ ಪದಕದೊಂದಿಗೆ ಸನ್ಮಾನಿಸಲಾಯಿತು. ದ್ವಿತೀಯ ಮತ್ತು ತೃತೀಯ ಸ್ಥಾನ ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಯಿತು.
ಮುಖ್ಯ ಅಥಿತಿಯಾಗಿ ಮುಂಬೈ ಉದ್ಯಮಿ ಬಿ.ಆರ್.ರಾವ್ ಉಪಸ್ಥಿತರಿ ದ್ದರು. ಬಳಿಕ ಹೆಜ್ಜೆ ಗೆಜ್ಜೆ ಸಂಸ್ಥೆಯ ವಿದ್ಯಾರ್ಥಿಗಳು ರಸಾಯನ ಶಾಸ್ತ್ರವನ್ನು ಭರತನಾಟ್ಯದ ಮೂಲಕ ವ್ಯಕ್ತಪಡಿಸುವ ವಿನೂತನವಾದ ರಸೋತ್ಕರ್ಷ ಕಾರ್ಯ ಕ್ರಮವನ್ನು ಪ್ರದರ್ಶಿಸಿದರು.