×
Ad

ಸ್ವಸಹಾಯ ಗುಂಪಿನಿಂದ ಗೌರವಯುತ ಬದುಕು: ಕೃಷ್ಣ ಬಿಲ್ಲವ

Update: 2018-08-19 20:39 IST

ಉಡುಪಿ, ಆ.19: ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ದೇಶದ ಉತ್ತಮ ಪ್ರಜೆಗಳಾಗಿ ಮಾಡುವುದು ಹೆತ್ತವರ ಕರ್ತವ್ಯ. ಇಂದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಲಕ್ಷಾಂತರ ಮಹಿಳೆಯರು ಸ್ವಸಹಾಯ ಗುಂಪಿನ ಸದಸ್ಯರಾಗಿ ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನ ಉಪಮಹಾ ಪ್ರಬಂಧಕ ಕೃಷ್ಣ ಬಿಲ್ಲವ ದೊಂಬೆ ಹೇಳಿದ್ದಾರೆ.

ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಅಪರಂಜಿ ನವೋದಯ ಸ್ವ ಸಹಾಯ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಎಸ್.ಗುರುರಾಜ್, ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ಉಡುಪಿ ಶಾಖಾ ವ್ಯವಸ್ಥಾಪಕ ರವೀಂದ್ರ ಭಟ್, ಮೇಲ್ವಿ ಚಾರಕ ಹರಿನಾಥ್, ಚಂದ್ರಶೇಖರ, ಕೃಷ್ಣ ಸಾಲಿಯನ್, ಶಿಲ್ಪವಿ., ಉದಯ್ ಕುಮಾರ್, ಸವಿತಾ ಶೆಟ್ಟಿ, ದಯಾನಂದ್ ಕುಂದರ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಸಂಘದ ರಾಜೇಶ ಆಚಾರ್ಯ ವಹಿಸಿದ್ದರು. ಪ್ರಕಾಶ ಆಚಾರ್ಯ ಸ್ವಾಗತಿಸಿದರು. ಗಣೇಶ ಆಚಾರ್ಯ ವಂದಿಸಿದರು. ರಮೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News