ಯುವವಾಹಿನಿ ಮಂಗಳೂರು ಮಹಿಳಾ ಘಟಕದಿಂದ ಯೋಧರಿಗೆ ಗೌರವ
Update: 2018-08-19 20:43 IST
ಮಂಗಳೂರು, ಆ.19: ಭಾರತೀಯ ಸೇನೆಗೆ ಸೇರುವಂತೆ ಇಂದಿನ ಯುವಜನಾಂಗಕ್ಕೆ ಪ್ರೇರಣೆ ನೀಡುವ ಕಾರ್ಯ ನಡೆಯಬೇಕಾಗಿದೆ ಎಂದು ಮಹಂತೇಶ್ ಗಡದ್ ಅಭಿಪ್ರಾಯಪಟ್ಟರು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಶನಿವಾರ ಯುವವಾಹಿನಿ ಸಭಾಂಗಣದಲ್ಲಿ ಭಾರತೀಯ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಭಾರತೀಯ ಭೂಸೇನೆಯಲ್ಲಿ 17 ವರ್ಷಗಳ ಸೇವೆ ಸಲ್ಲಿಸಿದ ಹವಾಲ್ದಾರ್ ಮಹಂತೇಶ್ ಗಡದ್ ಅವರ ಸೇವೆಯನ್ನು ಗುರುತಿಸಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಸಿ. ಕರ್ಕೆರ ಶುಭ ಹಾರೈಸಿದರು.
ಈ ಸಂದರ್ಭ ಕಾರ್ಯದರ್ಶಿ ರವಿಕಲಾ, ಉಪಾಧ್ಯಕ್ಷೆ ಉಮಾ ಶ್ರೀಕಾಂತ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರವಿಚಂದ್ರ, ಲಕ್ಷ್ಮಣ್ ಸಾಲ್ಯಾನ್, ಪದ್ಮನಾಭ ಮರೋಳಿ, ನವೀನ್ ಚಂದ್ರ, ರಾಜೇಶ್ ಅಮೀನ್, ಲಕ್ಷ್ಮೀ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.