ಬೆಳ್ತಂಗಡಿ: ಪಿಲಿಕಲ ಪಂಪ್ ಹೌಸ್‌ನಲ್ಲಿ ಭೂ ಕುಸಿತ; ಪೆಟ್ರೋಲ್ ಸಾಗಾಟ ಸ್ಥಗಿತ

Update: 2018-08-19 15:45 GMT

ಬೆಳ್ತಂಗಡಿ, ಆ. 19: ಬೆಂಗಳೂರು - ಮಂಗಳೂರು ಪೆಟ್ರೋಲ್ ಪೈಪ್ ಲೈನ್‌ನ ನೆರಿಯ ಗ್ರಾಮದ ಪಿಲಿಕಲದಲ್ಲಿರುವ ಪಂಪ್ ಹೌಸ್‌ನಲ್ಲಿ ಭೂ ಕುಸಿತದ ಭೀತಿ ಸೃಷ್ಟಿಯಾಗಿದ್ದು ಪೈಪ್‌ಲೈನ್ ಮೂಲಕವಾಗಿ ಪೆಟ್ರೋಲ್ ಸಾಗಾಟ ಸ್ಥಗಿತಗೊಳಿಸಲಾಗಿದೆ.

ಪಂಪ್ ಹೌಸ್‌ನ ಹಿಂಭಾಗದ ಗುಡ್ಡದ ಭೂಮಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಸಣ್ಣ ಪ್ರಮಾಣದಲ್ಲಿ ಕುಸಿತವಾಗಿದ್ದು ಕಂಪೌಡಿಗೆ ಹಾನಿಯಾಗಿದೆ. ಹಾಗೂ ಅಲ್ಲಿಯೇ ಇರುವ ಪೈಪ್ ಬೆಂಡ್ ಆಗಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಇದರ ಸಮೀಪವೇ 2008 ರಲ್ಲಿ ವರ್ಷಗಳ ಹಿಂದೆ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿತ್ತು. ನೆರಿಯ ಗ್ರಾಮದಲ್ಲಿ ಕೆಲದಿನಗಳ ಹಿಂದೆಯೂ ಭಾರೀ ಭೂಕುಸಿತವಾಗಿತ್ತು ಈ ಹಿನ್ನಲೆಯಲ್ಲಿ ಭೂಮಿ ಬಿರುಕು ಕಂಡು ಬಂದ ಹಿನ್ನಲೆಯಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅವರು ನೀಡಿರುವ ವರದಿಯ ಆಧಾರದಲ್ಲಿ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಸಾಗಾಟವನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ.

ಗುಡ್ಡ ಕುಸಿದರೆ ಇಡೀ ಪಂಪ್ ಹೌಸ್‌ಗೆ ಅಪಾಯವಿದೆ. ಅಲ್ಲದೆ  ಪೈಪ್ ಲೈನ್ ಹಾದುಹೋಗುವ ಪ್ರದೇಶಗಳಲ್ಲಿ ಇದೀಗ ಮಣ್ಣಿನ ಅಡಿಯಲ್ಲಿರುವ ಪೈಪ್ ಗಳು ಹೊರಗೆ ಕಾಣುತ್ತಿದೆ ಅದರ ಮೇಲೆ ಹಾಕಲಾಗಿದ್ದ ಮಣ್ಣು ಹಾಗೂ ಹೊದಿಕೆಗಳು ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಅಪಾಯಕಾರಿ ಸ್ಥಿತಿ ಎದುರಾಗುತ್ತಿದೆ. ಇಲ್ಲಿ ಪೈಪ್ ಲೈನ್‌ಗಳಿಗೆ ಹಾನಿಯಾದರೆ ಅದು ತಿಳಿಯುವುದು ಅಸಾಧ್ಯವಾಗಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.

ಪಿ ಮಹಮ್ಮದ್ ನೆರಿಯ ಗ್ರಾ. ಪಂ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News