ಸಿಮಿ ಎನ್‌ಕೌಂಟರ್ ಪ್ರಕರಣ: ಆಯೋಗದ ವರದಿಯಲ್ಲಿ ಹಸ್ತಕ್ಷೇಪಕ್ಕೆ ಸರ್ವೋಚ್ಚ ನ್ಯಾಯಾಲಯದ ನಕಾರ

Update: 2018-08-19 16:37 GMT

 ಹೊಸದಿಲ್ಲಿ,ಆ.19: ಪೊಲೀಸ್ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಿಮಿ ಸಂಘಟನೆಯ ಎಂಟು ಕಾರ್ಯಕರ್ತರ ಹತ್ಯೆಗಳ ಕುರಿತು ವಿಚಾರಣಾ ಆಯೋಗದ ವರದಿಯಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ಹತ ಸಿಮಿ ಕಾರ್ಯಕರ್ತರು 2016ರಲ್ಲಿ ಭೋಪಾಲದ ಜೈಲಿನಿಂದ ಪರಾರಿಯಾದ ಬಳಿಕ ಅವರ ಹತ್ಯೆಗಳು ನಡೆದಿದ್ದವು.

ತನ್ನ ವರದಿಯಲ್ಲಿ ಮಧ್ಯಪ್ರದೇಶ ಪೊಲೀಸರಿಗೆ ‘ಕ್ಲೀನ್ ಚಿಟ್’ನೀಡಿರುವ ಏಕಸದಸ್ಯ ಆಯೋಗವು,ಎಂಟು ಸಿಮಿ ಕಾರ್ಯಕರ್ತರ ಸಾವುಗಳಿಗೆ ಕಾರಣವಾದ ಬಲವನ್ನು ಪೊಲೀಸರು ಬಳಸಿದ್ದು ‘ನ್ಯಾಯೋಚಿತ’ ಮತ್ತು ‘ಅನಿವಾರ್ಯ’ವಾಗಿತ್ತು ಎಂದು ಹೇಳಿದೆ.

 ವರದಿಯನ್ನು ಪ್ರಸ್ತಾಪಿಸಿದ ಪೀಠವು,ಪ್ರಕರಣದ ಕುರಿತು ಸ್ವತಂತ್ರ ತನಿಖೆಯನ್ನು ಕೋರಿ ತನ್ನ ಮುಂದೆ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗಾಗಿ ಬಾಕಿಯಿರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿತು.

ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟವರ ಪೈಕಿ ಓರ್ವನ ಸಂಬಂಧಿ ಸ್ವತಂತ್ರ ತನಿಖೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News