×
Ad

ಕೇರಳ: ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯರು ಬೋಟ್ ಹತ್ತಲು ಮೆಟ್ಟಿಲಾದ ಜೈಸಲ್

Update: 2018-08-19 22:09 IST

ಮಲಪ್ಪುರಂ, ಆ.19: ಪ್ರವಾಹಪೀಡಿತ ಕೇರಳಕ್ಕೆ ಹಲವೆಡೆಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಮಹಿಳೆಯರು ಬೋಟ್ ಒಂದಕ್ಕೆ ಹತ್ತಲು ನೆರವಾದ ವ್ಯಕ್ತಿಯೊಬ್ಬರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ತನೂರ್ ನಿವಾಸಿಯಾಗಿರುವ 32 ವರ್ಷದ ಜೈಸಲ್ ಮೀನುಗಾರ ವೃತ್ತಿಯಲ್ಲಿ ತೊಡಗಿದ್ದವರು.

ವೆಂಗರದ ಮುತಲಮಾಡ್ ನಲ್ಲಿ ನೆರೆ ನಡುವೆ ಸಿಲುಕಿದ್ದ ಮೂವರು ಮಹಿಳೆ ಮತ್ತು ನವಜಾತ ಶಿಶುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ಎನ್ ಡಿಆರ್ ಎಫ್ ಗೆ  ನೆರವಾಗಿದ್ದಾರೆ.

“ಮೂವರು ಮಹಿಳೆಯರು ಸಿಲುಕಿಕೊಂಡಿರುವ ವೆಂಗರಾವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಎನ್ ಡಿಆರ್ ಎಫ್ ಸಿಬ್ಬಂದಿ ನಮಗೆ ಮಾಹಿತಿ ನೀಡಿದ್ದರು. ನಾವು ಅವರೊಂದಿಗೆ ಬೋಟ್ ಗಳನ್ನು ಕೇಳಿ ಮಹಿಳೆಯರನ್ನು ರಕ್ಷಿಸಿದರು” ಎಂದು ಜೈಸಲ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಮಹಿಳೆಯರನ್ನು ಬೋಟ್ ಒಂದಕ್ಕೆ ಹತ್ತಿಸಲು ಸಾಧ್ಯವಾಗದಿದ್ದಾಗ ಜೈಸಲ್ ಬಗ್ಗಿ ಕುಳಿತು ತಮ್ಮ ಬೆನ್ನನ್ನು ನೀಡಿದ್ದರು. ಮಹಿಳೆಯರು ಜೈಸಲ್ ರ ಬೆನ್ನಿಗೆ ತುಳಿದು ಬೋಟ್ ಹತ್ತಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News