“ಬಿಜೆಪಿಯ ಸಂಖ್ಯೆ ಹೆಚ್ಚಿದರೆ ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಮಸೂದೆ ಮಂಡನೆ”

Update: 2018-08-19 16:41 GMT

ಲಕ್ನೋ,ಆ.19: ಬಿಜೆಪಿಯು ಸಂಸತ್ತಿನ ಉಭಯ ಸದನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರನ್ನು ಹೊಂದಿದಾಗ ಅಗತ್ಯವಾದರೆ ಮತ್ತು ಬೇರೆ ಯಾವುದೇ ದಾರಿಯು ಇಲ್ಲದಿದ್ದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಪ್ರಜಾಸತ್ತಾತ್ಮಕ ಮಾರ್ಗವನ್ನು ಹಿಡಿಯಬಹುದೆಂದು ತಾನು ಆಶಿಸಿದ್ದೇನೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅಚರು ಹೇಳಿದ್ದಾರೆ.

ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸದ್ಯ ಸಂಸತ್ತಿನಲ್ಲಿ ನಮಗೆ ಸಾಕಷ್ಟು ಬಲವಿಲ್ಲ. ಲೋಕಸಭೆಯಲ್ಲಿ ನಾವು ಮಸೂದೆಯನ್ನು ಮಂಡಿಸಿ ಗೆಲ್ಲಿಸಿದರೂ ರಾಜ್ಯಸಭೆಯಲ್ಲ್ಲಿ ನಮ್ಮ ಸದಸ್ಯರ ಸಂಖ್ಯೆ ಕಡಿಮೆಯಿರುವುದರಿಂದ ಖಂಡಿತವಾಗಿಯೂ ಅಲ್ಲಿ ಸೋಲುತ್ತೇವೆ. ಶ್ರೀರಾಮನ ಪ್ರತಿಯೊಬ್ಬ ಭಕ್ತನಿಗೂ ಇದು ಗೊತ್ತು. ನ್ಯಾಯಾಲಯವು ಈ ವಿವಾದದ ಬಗ್ಗೆ ಶೀಘ್ರವೇ ತೀರ್ಪು ನೀಡಲಿದೆ ಎಂದರು.

ಆದರೆ ನಮಗೆ ಬಹುಮತ ದೊರಕಿದರೆ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳುತ್ತೇವೆ ಮತ್ತು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News